Site icon Suddi Belthangady

ಉಜಿರೆ ಕರಿಗಂಧ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ

ಉಜಿರೆ: ಕರಿಗಂಧ ಸೇವಾ ಟ್ರಸ್ಟ್ ಉಜಿರೆ ಇದರ ಆಶ್ರಯದಲ್ಲಿ ಒಂದು ದಿನದ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿ ಯು ಗ್ರಾಮ ಪಂಚಾಯತ್ ಉಜಿರೆ ಯ ಸಂಜೀವಿನಿ ಸಭಾಭವನದಲ್ಲಿ ಅ.22 ರಂದು ಪ್ರಾರಂಭಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಗ್ರಾಮ ಪಂಚಾಯತ್ ನ ಅದ್ಯಕ್ಷೆ ಉಷಾಕಿರಣ್ ರವರು ನೆರವೇರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಸೇವಾ ಟ್ರಸ್ಟ್ ನ “ಬನ್ನಿ ಕೈ ಜೋಡಿಸಿ ಅಶಕ್ತರಿಗೆ ಆಸರೆಯಾಗೋಣ! ” ಎಂಬ ಸಂದೇಶವು ಪ್ರತೀಯೊಬ್ಬರಲ್ಲು ಮನಮುಟ್ಟುವ ರೀತಿಯಲ್ಲಿದೆ ಇಂತಹ ಸೇವೆಮಾಡುವ ಟ್ರಸ್ಟ್ ಗಳಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿತವಚನಗಳನ್ನು ನೀಡಿದರು.

ಮುಖ್ಯ ಅಥಿತಿಗಳಾಗಿ ಗ್ರಾಮ ಪಂಚಾಯತ್ ಉಜಿರೆಯ ಮಾಜಿ ಅದ್ಯಕ್ಷರಾದ ಶ್ರೀನಿವಾಸ್ ಕೆ , ಗ್ರಾಮ ಪಂಚಾಯತ್ ಉಜಿರೆಯ ಸಿಬ್ಬಂದಿ ನಾಗೇಶ್ ಪೆರ್ಲ, ಕರಿಗಂಧ ಸೇವಾ ಟ್ರಸ್ಟ್ ನ ಸಂಚಾಲಕರಾದ ಕಿರಣ್ ಉಜಿರೆಯವರು ತರಬೇತಿಯನ್ನು ಉದ್ದೇಶಿಸಿ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿಯ ನಂತರದ ಅಣಬೆ ಬೆಳೆಯುವುದು ಮತ್ತು ಮಾರಾಟದ ವ್ಯವಸ್ಥೆಯನ್ನು ಟ್ರಸ್ಟ್ ನ ಮೂಲಕ ನಡೆಸಲಾಗುವುದು ಎಂದು ಹೇಳಿದರು.

ಅದ್ಯಕ್ಷರಾದ ಭರತ್, ಉಜಿರೆ ಗ್ರಾಮ ಪಂಚಾಯತ್ ನ ಸದಸ್ಯ ದಿನೇಶ್, ಉಜಿರೆ ಮೈತ್ರಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರದ ಅದ್ಯಕ್ಷರಾದ ರವಿ ಜೆ ಯವರು ಹಾಗೂ ಅಣಬೆ ಬೇಸಾಯ ತರಬೇತಿಯ ತರಬೇತುದಾರರಾದ ಸುಲೈಮಾನ್ ಬೆಳಾಲುರವರು ಉಪಸ್ಥಿತಿಯಲ್ಲಿದ್ದರು.

ವಿಟ್ಲ,ಪುತ್ತೂರು,ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಹೀಗೆ ನಾನಾ ಊರಿನ ಆಸಕ್ತರು ತರಬೇತಿಯನ್ನು ಪಡೆದುಕೊಂಡಿರುತ್ತಾರೆ.

ಕೊನೆಯದಾಗಿ ಗೌರವಾರ್ಪಣೆ ಗಳೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

Exit mobile version