Site icon Suddi Belthangady

ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಗೆ ಹೊಸ ಲುಕ್ ನೊಂದಿಗೆ ಸೇರಿದ 75 ವರ್ಷದ ಹಳೆಯ ಲಾರಿ

ಧರ್ಮಸ್ಥಳ: 75 ವರ್ಷ ಹಳೆಯ ಲಾರಿಯೊಂದು ಹೊಸ ಲುಕ್ ನೊಂದಿಗೆ ಓಲ್ಡ್ ಈಸ್ ಗೋಲ್ಡ್ ಎಂಬ ರೇಂಜ್ ಗೆ ರೆಡಿಯಾಗಿದೆ.75 ವರ್ಷ ಈ ಹಳೆಯ ಲಾರಿ ಇದೀಗ ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಸೇರಿಕೊಂಡಿದೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿಶೇಷ ಮುತುವರ್ಜಿಯಿಂದ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮಲ್ಯಾಡಿಯ ಗಜಾನನ ಬಾಡಿ ಬಿಲ್ಡ್ ಹಾಗೂ ವೆಲ್ಡಿಂಗ್ ಗ್ಯಾರೇಜ್ ನಲ್ಲಿ ಪುನರ್ ವಿನ್ಯಾಸಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿದೆ.

1948ನೇ ಇಸವಿಯ ಪೋರ್ಡ್ ಕಂಪನಿಯ ಎಂ ಸೀರೀಸ್‌ನ ಈ ಲಾರಿಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ತಂದೆಯವರ ಕಾಲದ ವಾಹನ. ಈ ಲಾರಿಯು ಕ್ಷೇತ್ರದ ಸರಕು ಸಾಗಾಣಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 30 ವರ್ಷ ಸೇವೆ ಸಲ್ಲಿಸಿ ತನ್ನ ಬಿಡಿ ಭಾಗಗಳ ಕೊರತೆಯಿಂದ ಹೊಸ ವಾಹನ ಗಳ ಆಗಮನ ದಿಂದ ತನ ಸೇವೆಗೆ ನಿವೃತ್ತಿ ಪಡೆದಿತ್ತು.

ವೀರೇಂದ್ರ ಹೆಗ್ಗಡೆಯವರು ತಮ್ಮ ತಂದೆಯ ಕಾಲದ ವಾಹನವನ್ನು ಸುಂದರವಾಗಿ ರೂಪಿಸಲು ತಾವೇ ಲಾರಿಯ ಹೊಸ ಲುಕ್‌ನ ನೀಲನಕ್ಷೆಯನ್ನು ತಯಾರಿಸಿ ಅವರೇ ಗ್ಯಾರೇಜು ಮಾಲೀಕರಿಗೆ ನೀಡಿ ಮರುನವೀಕರಿಸಿದ್ದಾರೆ.

1948ನೇ ಇಸವಿಯ ಫೋರ್ಡ್ ಕಂಪೆನಿಯಲ್ಲಿ ತಯಾರಾದ ಈ ಲಾರಿ ವಿರಿ ಸೀರೀಸ್‌ನದ್ದಾಗಿದ್ದು, ಮೇಕ್ ಇನ್ ಇಂಗ್ಲೆಂಡ್ ಆಗಿದ್ದು, 6 ಸಿಲಿಂಡರ್ ಸಾಮರ್ಥ್ಯದ ಎಂಜಿನ್, ಒರಿಜಿನಲ್ ಶೇಖ್ ಪ್ಯೂಯಿಡ್ ಬ್ರೇಕ್, ಅತಿ ದೊಡ್ಡದಾದ ಶೇಪ್ ಕ್ಯಾಬಿನ್ ಒಳಭಾಗದಲ್ಲಿ ವಿಶಾಲ ಜಾಗ, ನಾಜೂಕಾದ ಮರದ ಕೆಲಸಗಳು ಜೊತೆಗೆ 26 ಪೈಂಟಿಂಗ್ ಕೆಲಸದಿಂದ ಗಮನಸೆಳೆಯುತ್ತಿದೆ.

Exit mobile version