ಉಜಿರೆ: ವೈಜ್ಞಾನಿಕ ಸಂಶೋಧನೆಗಳು ಶಾಶ್ವತ ಪರಿಹಾರ ಹೊಳೆಸಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ನೈಸರ್ಗಿಕ ವಿಜ್ಞಾನ ವಿಭಾಗದ ಡೀನ್ ಡಾ. ಕಾಳಪ್ಪ ಪ್ರಶಾಂತ ಹೇಳಿದರು.
ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಕಾನ್‌ಕೆಮ್ 2023-24ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಲವು ದಶಕಗಳ ಹಿಂದಿನಿಂದಲೂ ಪಾಲಿಮರ್ ಬಳಕೆಯನ್ನು ಕಾಣುತ್ತಿವೆ.ಅದು ಇಂದಿಗೂ ಮುಂದುವರೆಯುತ್ತಿದೆ. ಪಾಲಿಮರ್ ಬಳಕೆಯಿಂದಾಗುವ ದು?ರಿಣಾಮಗಳ ಬಗ್ಗೆ ವಿಜ್ಞಾನಿಗಳಿಗೆ ಅರಿವಿದ್ದರೂ ಶಾಶ್ವತ ಪರಿಹಾರ ಕೊಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂದರು.
ಇಂದು ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ಪಾಲಿಮರ್ ಅಂಶವಿರುವ ವಸ್ತುಗಳು ಮಣ್ಣಿನಲ್ಲಿ ಕರಗಲು ಹಲವು ದಶಕಗಳೇ ಬೇಕಾಗಬಹುದು. ಅದರ ಪರ್ಯಾಯ ಮಾರ್ಗದಡೆಗೆ ಸಂಶೋಧನೆಗಳು ನಡೆಯಬೇಕಾದ ಅವಶ್ಯಕತೆ ಇದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎ ಕುಮಾರ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತರರೊಡನೆ ಮಾಡುವ ಸ್ಪರ್ಧೆಯ ಜೊತೆಗೆ ನಮ್ಮೊಳಗಿನ ಸ್ಪರ್ಧೆಯು ಅತಿ ಮಹತ್ವದ್ದಾಗಿರುತ್ತದೆ. ಆತ್ಮಾವಲೋಕನದೊಂದಿಗೆ ಉತ್ತಮ ನಾಳೆಯೆಡೆಗೆ ಮುನ್ನಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ರಸಾಯನಶಾಸ್ತ್ರದ ಕ್ಷೇತ್ರದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುವ ಉzಶದೊಂದಿಗೆ ವಿಭಾಗದ ಸೌಲಭ್ಯವಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೈಷ್ಣವಿ ಹಾಗೂ ಸಂಗಡಿಗರು ಪ್ರಾರ್ಥಿಸಿ, ಕಾನ್‌ಕೆಮ್ ಕಾರ್ಯದರ್ಶಿ ಡಾ.ಶಶಿಪ್ರಭಾ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಸುಪ್ರಿಯಾ ಮತ್ತು ಶ್ರುತಿ ನಿರೂಪಿಸಿ, ಕಾನ್‌ಕೆಮ್ ಜಂಟಿ ಕಾರ್ಯದರ್ಶಿ ಡಾ. ರಾಜೇಶ್ ಎನ್. ಹೆಗ್ಡೆ ವಂದಿಸಿದರು.