ಉಜಿರೆ: ಶಿಕ್ಷಣ ಇಲಾಖಾ ವತಿಯಿಂದ ಮೈಸೂರು ವಿಭಾಗ ಮಟ್ಟದ ಫುಟ್ ಬಾಲ್ ಪಂದ್ಯಾಟವು ಸಂತ ಜೋಸೆಫರ ಪದವಿ ಪೂರ್ವ ಕಾಲೇಜು-ಬಜ್ಪೆ ಇಲ್ಲಿ ಅ.18 ಮತ್ತು ಅ.19ರಂದು ಜರಗಿತು.
ದಕ್ಷಿಣ ಕನ್ನಡ ಜಿಲ್ಲಾ ತಂಡವು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ-ಉಜಿರೆ ಇಲ್ಲಿಯ ಹೆಝಲ್ ಪಿಂಟೋ, ಅನುಷ್ಕಾ ಶೆಟ್ಟಿ, ಕಶ್ವಿ ಕೋಟ್ಯಾನ್, ಅನನ್ಯ ರೋಸ್, ರೆನಿಶಾ ಜೇನಿ ಇವರು ಪ್ರೌಢ ಶಾಲಾ ವಿಭಾಗದಲ್ಲಿ ಮತ್ತು ರೋಸಾ ಜೋಯ್, ಶ್ರಾವಣ್ಯ, ದೀಪಿಕಾ ಇವರು ಪ್ರಾಥಮಿಕ ವಿಭಾಗದಲ್ಲಿ ಮೈಸೂರು ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು.
ಮುಂದಿನ ನವೆಂಬರ್ ತಿಂಗಳ ಪ್ರಥಮ ವಾರದಲ್ಲಿ ಬೆಂಗಳೂರಿನಲ್ಲಿ ಜರಗುವ ರಾಜ್ಯ ಮಟ್ಟದ ಪುಟ್ಬಾಲ್ ಪಂದ್ಯಾಟಕ್ಕೆ ಕಶ್ವಿ, ಅನುಷ್ಕಾ, ರೋಸಾ ಜೋಯ್, ಶ್ರಾವಣ್ಯ ಮತ್ತು ದೀಪಿಕಾ ಆಯ್ಕೆಯಾಗಿರುತ್ತಾರೆ.
ವಿಜೇತ ವಿದ್ಯಾರ್ಥಿನಿಯರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವಸಂತ ಹೆಗ್ಡೆ ಇವರ ನೇತೃತ್ವದಲ್ಲಿ ತರಬೇತಿ ಪಡೆದಿರುತ್ತಾರೆ.
ವಿಜೇತರನ್ನು ಶಾಲಾ ಸಂಚಾಲಕರಾದ ಪೂಜ್ಯ ರೆ!ಫಾ! ಜೇಮ್ಸ್ ಡಿಸೋಜಾ ಮತ್ತು ಪ್ರಾಂಶುಪಾಲರಾದ ಪೂಜ್ಯ ರೆ!ಫಾ! ವಿಜಯ್ ಲೋಬೊ ಇವರು ಅಭಿನಂದಿಸಿರುತ್ತಾರೆ