Site icon Suddi Belthangady

ನಾಳ: ಶರವನ್ನರಾತ್ರಿ ಪೂಜೆ ಮತ್ತು ಭಜನೋತ್ಸವ

ನ್ಯಾಯತರ್ಪು: ನಾಳ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ.15ರಿಂದ ಪ್ರಾರಂಭಗೊಂಡು ಅ.25ರವರೆಗೆ ನವರಾತ್ರಿ ಪೂಜೆ, ಪ್ರತಿದಿನ ಅನ್ನಸಂತರ್ಪಣೆ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ ನಡೆಯಲಿದೆ.

ಅ.20 ರಂದು ಭಜನಾ ಸೇವಾ ಜನಾರ್ಧಾನ ಪೂಜಾರಿ ಮತ್ತು ಮಕ್ಕಳು ಜಿ.ಕೆ.ನಿವಾಸ ಗೇರುಕಟ್ಟೆ ಇವರಿಂದ ಹಾಗೂ ಗೇರುಕಟ್ಟೆ ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಪಿಲಿಗೂಡು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾ ಮಾತೃ ಮಂಡಳಿ, ಭಜನಾ ಮಂಡಳಿ, ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು  ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಅ.21ರಂದು ಶ್ರೀಮತಿ ಪೂರ್ಣಿಮ  ಮತ್ತು ಕಮಲಾಕ್ಷಿ ಪೂಜಾರಿ ಹಾಗು ಮಕ್ಕಳು ಬಳ್ಳಿದಡ್ಡ ಮನೆ ಹೊಸಮಬೆ ಅವರಿಂದ ಭಜನಾ ಸೇವೆ. ಸಾಯಂಕಾಲ 6ರಿಂದ ಸಪ್ತಶತೀ ಪಾರಾಯಣ ಮತ್ತು ರಾತ್ರಿ 7ಕ್ಕೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಓಡೀಲು, ಶ್ರೀ ಉಳ್ಳಾಯ ಉಳ್ಳಾಲ್ತಿ ಭಜನ ತಂಡ ಬೀಟಿಗೆ ಚಾರ್ಮಾಡಿ ಅವರಿಂದ ಭಜನಾ ಸೇವೆ, ರಾತ್ರಿ 9ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

Exit mobile version