Site icon Suddi Belthangady

ನಾಳ: ಶರವನ್ನರಾತ್ರಿ ಪೂಜೆ ಮತ್ತು ಭಜನೋತ್ಸವ

ನ್ಯಾಯತರ್ಪು: ನಾಳ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ.15ರಿಂದ ಪ್ರಾರಂಭಗೊಂಡು ಅ.25ರವರೆಗೆ ನವರಾತ್ರಿ ಪೂಜೆ, ಪ್ರತಿದಿನ ಅನ್ನಸಂತರ್ಪಣೆ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ ನಡೆಯಲಿದೆ.

ಅ.17ರಂದು ಬಟ್ಟಮಾರು ಶಿವರಾಮ ಶೆಟ್ಟಿ ಸ್ಮರಾಣಾರ್ಥ ಭಜನಾ ಸೇವಾರ್ಥವಾಗಿ, ರಾತ್ರಿ 7ಕ್ಕೆ ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಗೇರುಕಟ್ಟೆ, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಮಲೆಂಗಲ್ಲು ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಅ.18ರಂದು ದೇವಕಿ ಕಿಟ್ಟಣ್ಣ ಶೆಟ್ಟಿ ಮತ್ತು ಮಕ್ಕಳ ಭಜನಾ ಸೇವಾರ್ಥವಾಗಿ ರಾತ್ರಿ 7ಕ್ಕೆ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಾಲಾಡಿ, ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಅ.19ರಂದು ನಾಳ ಗಂಪದಕೋಡಿ ವಸಂತ ಆಚಾರ್ಯ ಹಾಗೂ ಸಹೋದರರ ಭಜನಾ ಸೇವಾರ್ಥವಾಗಿ ರಾತ್ರಿ 7ಕ್ಕೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹನುಮಾನ್ ಬೊಳ್ಳುಕಲ್ಲು, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಕಿರಿಯಾಡಿ ತಂಡದಿಂದ ಭಜನ ಕಾರ್ಯಕ್ರಮ ನಡೆಯಿತು.ಹಾಗೂ ರಾತ್ರಿ 9ಕ್ಕೆ ನಾಳ ಶ್ರೀ ದುರ್ಗಾ ಪರಮೇಶ್ವರಿ ಪ್ರಸಾದಿತ ಚಿಕ್ಕಮೇಳದ ವತಿಯಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯರನ್ನು ಯಕ್ಷಗಾನ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾ ಮಾತೃ ಮಂಡಳಿ, ಭಜನಾ ಮಂಡಳಿ, ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಅ.20ರಂದು ಭಜನಾ ಸೇವಾ ಜನಾರ್ಧನ ಪೂಜಾರಿ ಮತ್ತು ಮಕ್ಕಳು ಜೆ.ಕೆ.ನಿವಾಸ ಗೇರುಕಟ್ಟೆ ಇವರಿಂದ ಹಾಗೂ ಗೇರುಕಟ್ಟೆ ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಪಿಲಿಗೂಡು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

Exit mobile version