ನೆರಿಯ: ಸೇತುವೆ ರಚನೆ ಆಗಬೇಕೆಂದು ನೆರಿಯ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಅವರ ವತಿಯಿಂದ ಮೋರಿ ಅಳವಡಿಕೆ ಕಾಮಗಾರಿ ಅ.18ರಂದು ಆರಂಭಗೊಂಡಿದೆ.
ನೆರಿಯದ ಕೋಲೋಡಿಯ ಮೋರಿ ಗಲಾಟೆಯ ನಂತರ ಅಕ್ಟೋಬರ್ 14ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಸೇರಿದಂತೆ ಪ್ರಮುಖರ ತಂಡ ಆ ಮೋರಿಯಿರುವ ಪ್ರದೇಶಕ್ಕೆ ತೆರಳಿ, ಸ್ಥಳ ಪರಿಶೀಲನೆ ಮಾಡಿದ ನಂತರ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಮತ್ತು ಎರಡು ದಿವಸಗಳಲ್ಲಿ ಕೆಲಸ ಪ್ರಾರಂಭಿಸುವ ಕುರಿತು ಭರವಸೆ ನೀಡಿ ಹೇಳಿದ ಸಮಯದ ಒಳಗೆ ಕೆಲಸ ಮಾಡಿ ಕೊಟ್ಟು ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು.