Site icon Suddi Belthangady

ಬೆಳ್ತಂಗಡಿ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಬ್ಸ್ ಬುಲ್ ಬುಲ್ಸ್ ಗಳಿಗೆ ರಾಜ್ಯಪಾಲರಿಂದ ರಾಜ್ಯಪ್ರಶಸ್ತಿ ಪತ್ರ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಆಯೋಜಿಸಿದ ರಾಜ್ಯಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಕಬ್ಸ್ ವಿದ್ಯಾರ್ಥಿಗಳಾದ ರಿಶನ್ ಶೆಟ್ಟಿ, ಅದ್ವಿತ್ ಎಸ್ ಪೂಜಾರಿ, ಬುಲ್ ಬುಲ್ಸ್ ವಿದ್ಯಾರ್ಥಿಗಳಾದ ದಿಶಾ ಡಿ ಎ, ಉನ್ನತಿ ಎಸ್, ಅಮೀನಾ ನಭಿಸಾ ಶೈಬಾ, ಅಭಿಜ್ಞಾ ಇವರು ಮಾನ್ಯ ರಾಜ್ಯಪಾಲರಿಂದ ಗಾಜಿನ ಮನೆ ಬೆಂಗಳೂರುನಲ್ಲಿ ನಡೆಯುವ ಪ್ರಶಸ್ತಿ ಪತ್ರ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾನ್ಯ ರಾಜ್ಯಪಾಲರಿಂದ ಪ್ರಶಸ್ತಿ ಪತ್ರವನ್ನು ಪಡೆಯಲಿರುವರು.

ಮುಖ್ಯ ಶಿಕ್ಷಕಿ ಹೇಮಲತ.ಎಂ.ಆರ್ ರವರ ಸಹಕಾರದೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಸಂಯೋಜಕ ಶಿಕ್ಷಕಿ ಪ್ರಮೀಳಾರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Exit mobile version