Site icon Suddi Belthangady

ನಾಳ: ಶರವನ್ನರಾತ್ರಿ ಪೂಜೆ ಮತ್ತು ಭಜನೋತ್ಸವ

ನ್ಯಾಯತರ್ಪು: ನಾಳ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ.15ರಿಂದ ಪ್ರಾರಂಭಗೊಂಡು ಅ.25ರ ವರೆಗೆ ನವರಾತ್ರಿ ಪೂಜೆ, ಪ್ರತಿದಿನ ಅನ್ನಸಂತರ್ಪಣೆ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ ನಡೆಯಲಿದೆ.

ಅ.15ರಂದು ಕುಂಟಿನಿ ಕೆ.ಎಸ್.ಹರಿಪ್ರಸಾದ್ ಅವರ ಭಜನಾ ಸೇವಾರ್ಥವಾಗಿ ರಾತ್ರಿ 7ಕ್ಕೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ನಾಳ ಮತ್ತು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ರಕ್ತೇಶ್ವರಿಪದವು ಭಜನಾ ತಂಡದಿಂದ.

ಅ.16ರಂದು ನಾಳ ಹೊಸಮನೆ ಬಿ.ಎ.ಗುಂಡೂರಾವ್ ಅವರ ಭಜನಾ ಸೇವಾರ್ಥವಾಗಿ, ರಾತ್ರಿ 7ಕ್ಕೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ತಾರೆಮಾರು ಮಚ್ಚಿನ ಮತ್ತು ಶ್ರೀ ನಾಗಶ್ರೀ ಭಜನಾ ತಂಡದಿಂದ ಭಜನಾ ಸೇವೆ ಹಾಗೂ ದೇವರಿಗೆ ರಾತ್ರಿ ವಿಶೇಷ ಮಹಾಪೂಜೆ ಹಾಗು ರಾತ್ರಿ 9ರಿಂದ ಶ್ರೀ ದುರ್ಗಾ ಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನಾಳ ಮತ್ತು ಜಿಲ್ಲಾ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ ಬಯಲಾಟ ‘ಬ್ರಹ್ಮಕಪಾಲ’ ಕಾರ್ಯಕ್ರಮ ನಡೆಯಿತು.

ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾ ಮಾತೃ ಮಂಡಳಿ, ಭಜನಾ ಮಂಡಳಿ, ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version