Site icon Suddi Belthangady

ಉಜಿರೆಯಲ್ಲಿ ಗೋ ರಥಯಾತ್ರೆ, ಸಾಮೂಹಿಕ ಗೋ ಪೂಜೆ ಹಾಗೂ ಧಾರ್ಮಿಕ ಸಭೆ

ಉಜಿರೆ : ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಬ್ರಹ್ಮಗಿರಿ ಗೋವಿನತೋಟ ಪುದು ಬಂಟ್ವಾಳ ಮತ್ತು ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಧರ್ಮ ರಕ್ಷಾರ್ಥರಾಷ್ಟ್ರ ರಕ್ಷಾರ್ಥ ಗೊರಕ್ಷಾರ್ಥ ನ.14 ರಿಂದ 22 ರ ವರೆಗೆ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಮತ್ತು ಗೋ ನವರಾತ್ರಿ ಉತ್ಸವ ರಾಷ್ಟ್ರಹಿತಕ್ಕಾಗಿ ನಾರಾಯಣ ಕವಚ ಯಾಗ ನಡೆಯಲಿದೆ.

ಇದರ ಪೂರ್ವಭಾವಿಯಾಗಿ ಸೆ.24 ರಿಂದ ನ.8ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಸಂಚಾರಿಸಿ ಅ.16 ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ನೆರವೇರಿಸಿ ನಂತರ ವಾಹನ ಜಾಥಾದ ಮೂಲಕ ಮುಖ್ಯ ರಸ್ತೆಯಾಗಿ ಹೊರಟು ಉಜಿರೆಗೆ ಆಗಮಿಸಿ ಉಜಿರೆಯ ಬೆಳಾಲು ಕ್ರಾಸ್ ನಿಂದ ವಿವಿಧ ಭಜನಾ ತಂಡಗಳಿಂದ ಭವ್ಯ ಮೆರವಣಿಗೆಯಲ್ಲಿ ಬಂದು ಶ್ರೀ ಜನಾರ್ದನ ದೇವಸ್ಥಾನದ ಎದುರು ಸಾಮೂಹಿಕ ಗೋ ಪೂಜೆ ನಡೆದು ಬಳಿಕ ಶಾರದಾ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಿತು.

ಅಧ್ಯಕ್ಷತೆಯನ್ನು ಕಳೆ0ಜ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ. ಎಂ.ದಯಾಕರ್ ವಹಿಸಿದ್ದರು.

ಅಧ್ಯಕ್ಷತೆಯನ್ನು ಕಳೆಂಜ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ ದಯಾಕರ್ ವಹಿಸಿದ್ದರು.

ವೇದಿಕೆಯಲ್ಲಿ ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕೃಷ್ಣ ಭಟ್ ಕೊಕ್ಕಡ, ರಥಯಾತ್ರೆ ಮಾರ್ಗದರ್ಶಕ ಭಕ್ತಿಭೂಷಣ್ ದಾಸ್ ಪ್ರಭೂಜೀ,ಬೆಳ್ತಂಗಡಿ ಗೋಯಾತ್ರೆ ಸಮಿತಿಯ ಸಂಪತ್ ಬಿ ಸುವರ್ಣ,ಶ್ರೀ ರಾಧಾ ಸುರಭಿ ಗೋ ಮಂದಿರದ ಕಾರ್ಯಾಧ್ಯಕ್ಷ ತಾರನಾಥ ಕೊಟ್ಟಾರಿ,ಉಪಾಧ್ಯಕ್ಷ ರಾಮದಾಸ್ ಉಪಸ್ಥಿತರಿದ್ದರು.

Exit mobile version