Site icon Suddi Belthangady

ಸಾಮರಸ್ಯ ಸಾರಿದ ಮಂಗಳೂರು ದಸರಾ-ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಹರ್ಷ

ಮಂಗಳೂರು: ಒಂದೇ ಜಾತಿ ಒಂದೇ ಮತ ಒಂದೇ ದೇವರು ಮಾನವರಿಗೆ ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹಾಪುರುಷರು ಸಿದ್ಧಾಂತ ಇಂದಿನ ಸಮಾಜಕ್ಕೆ ಅಗತ್ಯ.ನಾವೆಲ್ಲರೂ ದೇವರ ಮಕ್ಕಳು. ಕುದ್ರೋಳಿ ಕ್ಷೇತ್ರದಲ್ಲಿ ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ಉತ್ಸವ ಮಾದರಿ ಎಂದು ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ‌ಲಾರೆನ್ಸ್ ಮುಕುಝಿ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಸೋಮವಾರ ಪಾಲ್ಗೊಂಡು ದೇವರ ದರುಶನ ಪಡೆದು‌ ಕ್ಷೇತ್ರದ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು.

ಕುದ್ರೋಳಿ ಕ್ಷೇತ್ರದ ಪರವಾಗಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸದಸ್ಯರಾದ ರಾಧಾಕೃಷ್ಣ, ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಚೇರ್ಮನ್ ಸೂರ್ಯಕಾಂತ್ ಜೆ. ಸುವರ್ಣ ಆತ್ಮೀಯವಾಗಿ ಸ್ವಾಗತಿಸಿದರು.

ಕಂಕನಾಡಿ ಆಲ್ಫೋನ್ಸ್ ಚರ್ಚ್ ಧರ್ಮಗುರು ಫಾ.ಮಾಣಿ, ಬೆಳ್ತಂಗಡಿ ಧರ್ಮಪ್ರಾಂತ್ಯ ಪಿಆರ್‌ಓ ಸೆಬಾಸ್ಟಿಯನ್ ಕೆ.ವಿ ಜತೆಗಿದ್ದರು.

Exit mobile version