Site icon Suddi Belthangady

ಶಿರ್ಲಾಲಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ- ಗ್ರಾಮೀಣ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಕರಾಗಲು ಪೂರಕ: ವಸಂತ ಬಂಗೇರ

ಬೆಳ್ತಂಗಡಿ : ‘ಹಳ್ಳಿಯ ರೈತರ ಮಕ್ಕಳು ಆಡುತ್ತಿದ್ದ ಕಬಡ್ಡಿ ಕ್ರೀಡೆ ಇಂದು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿ ಬೆಳೆದಿದೆ.ಹಾಗಾಗಿ ಇಂದು ಗ್ರಾಮೀಣ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಕರಾಗಿ ಮೂಡಿಬರಲು ಸಾಧ್ಯವಾಗಿದೆ’ ಎಂದು ಮಾಜಿ ಶಾಸಕ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಕೆ.ವಸಂತ ಬಂಗೇರ ಹೇಳಿದರು.

ಅವರು ಅ.15ರಂದು ಶಿರ್ಲಾಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ವಠಾರದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕ ಮತ್ತು ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲು-ಕರಂಬಾರು ಇದರ ಆಶ್ರಯದಲ್ಲಿ ಬ್ರಹ್ಮ ಬೈದರ್ಕಳ ಗರಡಿ ಸಮಿತಿ ಶಿರ್ಲಾಲು ಕರಂಬಾರು, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಶಿರ್ಲಾಲು ಕರಂಬಾರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವವಾಹಿನಿ ಸೇವಾ ಚಟುವಟಿಕೆಗಳ ಸಹಾಯಾರ್ಥ 55 ಕೆ.ಜಿ.ವಿಭಾಗದ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

‘ಕಬಡ್ಡಿ ಹಿಂದೆ ಗ್ರಾಮೀಣ ಮಟ್ಟದಲ್ಲೇ ಇದ್ದ ಕಾರಣ ಜಗಳವಿಲ್ಲದೆ ಪಂದ್ಯ ಮುಗಿಯುತ್ತಿರಲಿಲ್ಲ. ಆದರೆ ಇಂದು ಕಬಡ್ಡಿಯಲ್ಲಿ ಹಲವು ನಿಯಮಗಳು ಬಂದಿರುವುದರಿಂದ ಒಂದು ಶಿಸ್ತಿನ ಕ್ರೀಡೆಯಾಗಿದೆ. ಹಾಗಾಗಿ ಯಾವುದೇ ಅಶಿಸ್ತಿಗೆ ಅವಕಾಶ ನೀಡದೆ ಕ್ರೀಡಾ ಸ್ಪರ್ಧಿಗಳು ಹಾಗೂ ಕ್ರೀಡಾ ಪ್ರೇಮಿಗಳು ಕ್ರೀಡಾ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು’ ಎಂದರು.

ಶಿರ್ಲಾಲು – ಕರಂಬಾರು ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಶಿರ್ಲಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಎಂ.ಶೆಟ್ಟಿ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್,
ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದ ಅರ್ಚಕ ಸೂರ್ಯನಾರಾಯಣ ರಾವ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ನ, ಶಿರ್ಲಾಲು ಬ್ರಹ್ಮ ಬೈದರ್ಕಳ ಗರಡಿ ಸಮಿತಿ ಅಧ್ಯಕ್ಷ ವಿಶ್ವನಾಥ್ ಸಾಲಿಯಾನ್ ಪುದ್ದರಬೈಲ್, ಯುವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರಸಾದ್ ಎಂ.ಕೆ. ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕ್ರೀಡಾ ಸಂಚಾಲಕ ಉಮೇಶ್ ಕಂಬಳದಡ್ಡ ಉಪಸ್ಥಿತರಿದ್ದರು.ಕರಂಬಾರು ಗ್ರಾಮದ ಕಮಲ ಎಂಬವರಿಗೆ ಆರೋಗ್ಯ ನಿಧಿ ಹಸ್ತಾಂತರಿಸಲಾಯಿತು.

ಶ್ರೇಯ ಮತ್ತು ತೇಜಸ್ವಿ ಪ್ರಾರ್ಥಿಸಿದರು.ಯುವವಾಹಿನಿ ಸಂಚಲನ ಸಮಿತಿ ನಿರ್ದೇಶಕ ದಿನೇಶ್ ಕರ್ದೊಟ್ಟು ಸ್ವಾಗತಿಸಿ, ಪ್ರಸಾದ್ ಕರಂಬಾರು ಕಾರ್ಯಕ್ರಮ ನಿರೂಪಿಸಿದರು.ಸಂಚಲನ ಸಮಿತಿಯ ಮಾಜಿ ಅಧ್ಯಕ್ಷ ರಂಜಿತ್ ಅಜಿರೋಳಿ ವಂದಿಸಿದರು.

Exit mobile version