Site icon Suddi Belthangady

ಬೆಳ್ತಂಗಡಿಯಲ್ಲಿ ಡಾ.ಶಿವರಾಮ ಕಾರಂತ ಸ್ಮರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ ಶಿವರಾಮ ಕಾರಂತರ ಜನ್ಮ ದಿನದ ಅಂಗವಾಗಿ ಸ್ಮರಣೆ ಕಾರ್ಯಕ್ರಮ ವಾಣಿ ವಿದ್ಯಾ ಸಂಸ್ಥೆಯಲ್ಲಿ ಜರಗಿತು.ನಿವೃತ್ತ ಪ್ರಾಚಾರ್ಯರಾದ ಕೃಷ್ಣಪ್ಪ ಪೂಜಾರಿಯವರು ಡಾ.ಕಾರಂತರ ನೆನಪುಗಳನ್ನು ಮಾಡುತ್ತಾ ಡಾ.ಕಾರಂತರು ಓರ್ವ ಬೆರಗಿನ ವ್ಯಕ್ತಿತ್ವದವರು.ತಾನು ಕೈಯಾಡಿಸಿದ ಕ್ಷೇತ್ರದಲ್ಲಿ ಅಧ್ಯಯನಶೀಲರಾಗಿ ಅದ್ಭುತ ಸಾಧನೆ ಮಾಡಿದವರು. ಅವರೋರ್ವ ಶಕ್ತಿ.ಇಂದಿನ ಯುವ ಜನಾಂಗದವರು ಡಾ. ಕಾರಂತರ ಬಗ್ಗೆ ಓದಿ ತಿಳಿದುಕೊಳ್ಳುವ ಆಸಕ್ತಿ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಯದುಪತಿ ಗೌಡರು ವಹಿಸಿದ್ದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸಂಘಟನಾ ಕಾರ್ಯದರ್ಶಿಗಳು, ವಾಣಿ ಕಾಲೇಜಿನ ಉಪನ್ಯಾಸಕರೂ ಆದ ಬೆಳ್ಳಿಯಪ್ಪ ರವರು ವಂದಿಸಿದರು.

ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಇನ್ನೋರ್ವ ಕಾರ್ಯದರ್ಶಿಗಳಾದ ಪ್ರಮೀಳಾರವರು ಉಪಸ್ಥಿತರಿದ್ದರು.ಸಭೆಗೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಉಮೇಶ್ ಶೆಟ್ಟಿ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಲಕ್ಷ್ಮೀನಾರಾಯಣ ಕೆ, ಅಶ್ರಫ್ ಆಲಿ ಕುಂಞಿ ಮುಂಡಾಜೆ, ಗಣಪತಿ ಭಟ್ ಕುಳಮರ್ವ, ಅಮಿತಾನಂದ ಹೆಗ್ಡೆ, ಡಾ.ದಿವ ಕೊಕ್ಕಡ, ವಸತಿ ಟಿ ನಿಡ್ಲೆ, ಅನುರಾಧ ರಾವ್ ಬೆಳ್ತಂಗಡಿ, ಧರಣೇಂದ್ರ ಕೆ ಜೈನ್ ಮೊದಲಾದವರು ಆಗಮಿಸಿದ್ದರು.

Exit mobile version