Site icon Suddi Belthangady

ಪಡ್ಡಂಡಡ್ಕ ಮಸೀದಿ ನೂತನ ಅಧ್ಯಕ್ಷ ಇಸ್ಮಾಯಿಲ್ ರವರಿಗೆ ಸನ್ಮಾನ

ಪೆರಿಂಜೆ: ನೂರುಲ್ ಹುಧಾ ಜುಮ್ಮಾ ಮಸೀದಿ ಪಡ್ಡಂದಡ್ಕ ಇದರ ಆಡಳಿತ ಕಮಿಟಿಗೆ ಅವಿರೋಧವಾಗಿ ಆಯ್ಕೆಯಾದ ಇಸ್ಮಾಯಿಲ್ ಪೆರಿಂಜೆ ಇವರನ್ನು ನಿಕಟ ಪೂರ್ವ ಅಧ್ಯಕ್ಷ ಜನಾಬ್ ಮೊಹಮ್ಮದ್ ಹಾಜಿ ತನ್ನ ನೂತನ ಗೃಹ ಪ್ರವೇಶ ಸಂದರ್ಭದಲ್ಲಿ ಶಾಲು ಹೊದಿಸಿ ಹೂಗುಚ್ಛ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ಮಹಮ್ಮದ್ ಎಚ್ ವೇಣೂರು, ಹಿರಿಯರಾದ ಉಸ್ಮಾನ್ ಪಿ. ಮತ್ತಿರರರು ಉಪಸ್ಥಿತರಿದ್ದರು

Exit mobile version