Site icon Suddi Belthangady

ಕಣಿಯೂರು: ಗ್ರಾ.ಪಂ ನಲ್ಲಿ ಗಿರಿಯಪ್ಪ ನಾಯ್ಕ ರವರಿಗೆ ವಿದಾಯ ಸಮಾರಂಭ

ಪದ್ಮುಂಜ: ಇಲ್ಲಿಯ ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರಿಯಪ್ಪ ನಾಯ್ಕ ರವರಿಗೆ ವಯೋನಿವ್ರಿತ್ತಿಯಾಗಿದ್ದು ಇವರ ವಿದಾಯ ಸಮಾರಂಭ ಅ.11 ರಂದು ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಪಂ.ಅಧ್ಯಕ್ಷ ಯಶವಂತ ಎನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಪಂ.ಸದಸ್ಯ ಸೀತಾರಾಮ ಮಡಿವಾಳ, ಪಂ.ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಹಾಗೂ ಪಂ.ಸಿಬ್ಬಂದಿ ಪ್ರದೀಪ್ ರವರು ಮಾತನಾಡಿ ಗಿರಿಯಪ್ಪ ನಾಯ್ಕ ರವರು ತನ್ನ ಕರ್ತವ್ಯದ ಅವದಿಯಲ್ಲಿ ನಿರ್ವಹಿಸಿದ ಕರ್ತವ್ಯ ನಿಷ್ಠೆಯನ್ನು ನೆನಪಿಸಿಕೊಂಡರು.

ಗಿರಿಯಪ್ಪ ರವರು ಮಾತನಾಡಿ ತನ್ನ ಅವದಿಯಲ್ಲಿ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಹ ಸಿಬ್ಬಂದಿಗಳ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.ಇವರಿಗೆ ಪಂಚಾಯತ್ ವತಿಯಿಂದ ಹಾಗೂ ಸಿಬ್ಬಂದಿಗಳ ವತಿಯಿಂದ ಶಾಲು ಫಲಪುಷ್ಪ ಹಾರ ಹಾಕಿ ಚಿಣ್ಣರ ಉಂಗುರ ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು.

ಉಪಾಧ್ಯಕ್ಷೆ ಜಾನಕಿ ಹಾಗೂ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಪಂ.ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ರವರು ಸ್ವಾಗತಿಸಿದರು.ಕಾರ್ಯದರ್ಶಿ ರಮೇಶ್ ರವರು ಧನ್ಯವಾದ ಸಲ್ಲಿಸಿದರು.

Exit mobile version