Site icon Suddi Belthangady

ಬದನಾಜೆ ಪ್ರೌಢ ಶಾಲೆಯಲ್ಲಿ ಶ್ರೀ ಗುರುದೇವ ಪ್ರ.ದ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

ಉಜಿರೆ: ಬದನಾಜೆ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅ.11ರಂದು ನಡೆಯಿತು.

ಅಧ್ಯಕ್ಷತೆಯನ್ನು ಬದನಾಜೆ ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ ಕಾರ್ಯದಕ್ಷ ಸೀತಾರಾಮ್ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸೇವೆಯ ಮೂಲಕ ಮುಖ್ಯ ವಾಹಿನಿಗೆ ಬರುವ ಪ್ರಯತ್ನವನ್ನು ಮಾಡಬೇಕು.ಸೇವೆಯೇ ಜೀವನದ ಮೂಲವಾಗಿರಬೇಕು ಸೇವೆ ಮಾಡುವ ಮೂಲಕ ನಮ್ಮ ಜೀವನಕ್ಕೆ ಸಾರ್ಥಕಯವನ್ನು ಕೊಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಬದನಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತ ಕುಮಾರಿ, ಎಸ್‌ಡಿಎಂಸಿ ಅಧ್ಯಕ್ಷ ಅನಿಲ್ ಡಿಸೋಜಾ, ಪ್ರೌಢಶಾಲಾ ಎಸ್‌ಡಿಎಂ ಸದಸ್ಯ ರಾಮಯ್ಯ ಗೌಡ ಮಾಚಾರು, ಆನಂದ ಗೌಡ ಭಾರತಿ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಜಮುನಾ ಸಮಾರೋಪ ಭಾಷಣವನ್ನು ಮಾಡಿದರು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಿ.ಎ.ಶಮಿಉಲ್ಲಾ ಶಿಬಿರದ ಸಮಗ್ರ ವರದಿಯನ್ನು ವಾಚಿಸಿದರು.ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕಿಯರಾದ ಕು.ಪ್ರತೀಕ್ಷ, ಕು.ಜ್ಯೋತಿ, ಡುಂಡಿರಾಜ್ ವೀರೇಶ್, ಶಿಬಿರದ ಅನುಭವವನ್ನು ಹಂಚಿಕೊಂಡರು.ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಸ್ವಾಗತಿಸಿ, ಸಹಶಿಬಿರಾಧಿಕಾರಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.ಸಹ ಶಿಬಿರಧಿಕಾರಿ ಕುಮಾರಿ ಬಬಿತ ವಂದಿಸಿದರು.

Exit mobile version