Site icon Suddi Belthangady

ಕರ್ನಾಟಕ ರಾಜ್ಯ ಪರವನ್ ಸಂಘದ ವತಿಯಿಂದ ದಸರಾ ಕ್ರೀಡಾಕೂಟ-2023

ತುಳುನಾಡಿನಲ್ಲಿ ದೈವ ನರ್ತನ ಸೇವೆ ಮಾಡುತ್ತಿರುವ ಪರವ ಸಮುದಾಯದ ಕರ್ನಾಟಕ ರಾಜ್ಯ ಪರವನ್ ಸಂಘದ ವತಿಯಿಂದ ದಸರಾ ಕ್ರೀಡಾಕೂಟ-2023 ಪರವನ್ ಸಮಾಜದ ಬಂಧುಗಳಿಗಾಗಿ ಇದೇ ಬರುವ ಅ.15ರಂದು ಮೂಡಬಿದಿರೆಯ ಸರಕಾರಿ ಹಿರಿಯ ಮತ್ತು ಪ್ರೌಢಶಾಲೆ ಪ್ರಾಂತ್ಯದ ಕ್ರೀಡಾಂಗಣದಲ್ಲಿ ನಡೆಯಲಿರುವುದು ಎಂದು ಸಂಘದ ಅಧ್ಯಕ್ಷರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ ಮತ್ತು ಬೇರೆ ಬೇರೆ ವಿಭಾಗಗಳಲ್ಲಿ ಬೇರೆ ಬೇರೆ ವಿಧದ ಕ್ರೀಡೆಗಳನ್ನು ಸಮಾಜ ಬಾಂಧವರಿಗಾಗಿ ಆಯೋಜಿಸಲಾಗಿದೆ.

ರಾಜ್ಯಾದ್ಯಂತ ನೆಲೆಸಿರುವ ಎಲ್ಲಾ ಪರವನ್ ಸಮುದಾಯದ ಸಮಾಜ ಬಂದುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version