Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ.ವಿ ಹೆಗ್ಗಡೆಯವರಿಂದ ಭಾರತೀಯ ಜೈನ್‌ಮಿಲನ್ ಮಂಗಳೂರು ವಿಭಾಗ ಮಟ್ಟದ ಜಿನ ಭಜನೆ ಸೀಸನ್ ಏಳರ ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ನವೆಂಬರ್ ತಿಂಗಳ 5ನೇ ತಾರೀಖಿನಂದು ವೇಣೂರಿನಲ್ಲಿ ನಡೆಯುವ ಭಾರತೀಯ ಜೈನ್‌ಮಿಲನ್ ಮಂಗಳೂರು ವಿಭಾಗ ಮಟ್ಟದ ಜಿನ ಭಜನೆ ಸೀಸನ್ ಏಳರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ.ವಿ ಹೆಗ್ಗಡೆಯವರು ಬಿಡುಗಡೆ ಮಾಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ ಹರ್ಷೇಂದ್ರ ಕುಮಾರ್,ಸುಪ್ರಿಯ ಹರ್ಷೇಂದ್ರ ಕುಮಾರ್ ಮತ್ತು ಸೋನಿಯಾ ವರ್ಮ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಜೈನ್ ಮಿಲನ್, ಮಂಗಳೂರು ವಿಭಾಗದ ಉಪಾಧ್ಯಕ್ಷ ವೀರ್ ಸುದರ್ಶನ್ ಜೈನ್ ಬಂಟ್ವಾಳ, ಕಾರ್ಯದರ್ಶಿ ವೀರ್ ಸುಭಾಷ್ ಚಂದ್ರ ಜೈನ್ ಬಂಟ್ವಾಳ, ನಿರ್ದೇಶಕರಾದ ವೀರ್ ಬಿ. ಸೋಮಶೇಖರ ಶೆಟ್ಟಿ, ವೀರ್ ಬಿ ಪ್ರಮೋದ್ ಕುಮಾರ್ ವೇಣೂರು, ವೀರಾಂಗನಾ ರಾಜಶ್ರೀ ಜೈನ್, ಜೊತೆ ಕಾರ್ಯದರ್ಶಿ ವೀರಾಂಗಣ ಶ್ವೇತಾ ಜೈನ್ ಮೂಡುಬಿದರಿ, ವೇಣೂರು ಜೈನ್ ಮಿಲನ್ ಅಧ್ಯಕ್ಷರಾದ ವೀರ್ ಸುಕುಮಾರ್ ಜೈನ್, ಕಾರ್ಯದರ್ಶಿ ವೀರ್ ನಿರ್ಮಲ್ ಕುಮಾರ್ ಜೈನ್, ಉಪಾಧ್ಯಕ್ಷರಾದ ವೀರ್ ವೃಷಭ ರಾಜ ಜೈನ್ ವೀರಾಂಗನಾ ಸಂಭಾಷಣಿ, ಕೋಶಾಧಿಕಾರಿ ವೀರ್ ಗುಣಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Exit mobile version