Site icon Suddi Belthangady

ಅ.15-22: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ- ಪ್ರತಿದಿನ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಅ. 15 ರಿಂದ 22ರ ವರೆಗೆ ನಡೆಯಲಿವೆ.ಪ್ರತಿದಿನ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ದಿನ ಸಂಜೆ 6 ಗಂಟೆಯಿಂದ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅ.15 ಭಾನುವಾರ: ಕುಮಾರಿ ಮಹಿಮಾ ಭಟ್ ಸರ್ಪಂಗಳ, ದರ್ಬೆ, ಪುತ್ತೂರು: ಶಾಸ್ತ್ರೀಯ ಸಂಗೀತ, ಅ. 16, ಸೋಮವಾರ: ವೈ.ಜಿ. ಶ್ರೀಲತಾ ನಿಕ್ಷಿತ್, ಬೆಂಗಳೂರು: ವೀಣಾವಾದನ, ಅ.17: ಮಂಗಳವಾರ: ಸರ್ವೇಶ್ ದೇವಸ್ಥಳಿ, ಉಜಿರೆ: ಶಾಸ್ತ್ರೀಯ ಸಂಗೀತ, ಅ.18 ಬುಧವಾರ: ಶ್ರೀದೇವಿ ಸಚಿನ್, ಧರ್ಮಸ್ಥಳ: ಸುಗಮ ಸಂಗೀತ, ಅ.19: ಗುರುವಾರ: ಕುಮಾರಿ ಗ್ರೀಷ್ಮಾ ಕಿಣಿ ಮತ್ತು ಕುಮಾರಿ ಶ್ವೇತಾ ಕಾಮತ್, ಮಂಗಳೂರು: ದಾಸವಾಣಿ, ಅ.20: ಶುಕ್ರವಾರ: ಕೆ. ಪ್ರಣೀತ ಬಳ್ಳಕ್ಕುರಾಯ, ಉಡುಪಿ: ಶಾಸ್ತ್ರೀಯ ಸಂಗೀತ, ಅ.21: ಶನಿವಾರ: ಕುಮಾರಿ ವೈಷ್ಣವಿ ವಿ. ಭಟ್, ಮಂಗಳೂರು: ಸ್ಯಾಕ್ಸೋಫೋನ್ ವಾದನ. ಅ.22: ಭಾನುವಾರ: ಯಶಸ್ವಿನಿ ಉಳ್ಳಾಲ್, ಮಂಗಳೂರು ಮತ್ತು ಕುಮಾರಿ ಭಾಗ್ಯಶ್ರೀ ಎಂ.ಪಿ., ಚಿಕ್ಕಮಗಳೂರು: ಸುಗಮಸಂಗೀತ ಕಾರ್ಯಕ್ರಮ ನಡೆಯಲಿದೆ.

Exit mobile version