Site icon Suddi Belthangady

ವಲಯ ಮಟ್ಟದ ಪ್ರೌಡ ವಿಭಾಗದ ಅಥ್ಲೆಟಿಕ್ಸ್ ಪಂದ್ಯಾಟ: ಸೈಂಟ್ ಪೀಟರ್ ಶಾಲೆಗೆ ಹಲವು ಬಹುಮಾನಗಳು

ಅಳದಂಗಡಿ: ನಾರಾವಿ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಸರಕಾರಿ ಪ್ರೌಢಶಾಲೆ ಬಳಂಜ ಇಲ್ಲಿ ನಡೆಯಿತು.ಬಾಲಕಿಯರ ವಿಭಾಗದಲ್ಲಿ,ಎತ್ತರ ಜಿಗಿತ ಮತ್ತು ಟ್ರಿಪಲ್ ಜಂಪ್ ನಲ್ಲಿ 10ನೇ ತರಗತಿಯ ಲಿಯಾನ ಪಾಯ್ಸ್ ಪ್ರಥಮ 1500 ಮೀ ಓಟದಲ್ಲಿ 8ನೆ ತರಗತಿಯ ಪ್ರತೀಕ್ಷ ದ್ವಿತೀಯ, ಎತ್ತರ ಜಿಗಿತದಲ್ಲಿ 9ನೇ ತರಗತಿಯ ಹರ್ಷಾ ದ್ವಿತೀಯ 100 ಮೀ ರಿಲೇ ಓಟದಲ್ಲಿ ಬಾಲಕಿಯರ ತಂಡ ದ್ವಿತೀಯ ಬಾಲಕರ ವಿಭಾಗದಲ್ಲಿ ಟ್ರಿಪಲ್ ಜಂಪ್ ನಲ್ಲಿ 9ನೇತರಗತಿಯ ಡಿಯೋನ್ ಪ್ರಿನ್ಸ್ ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಕೇವನ್ ರವರು ತರಬೇತಿ ನೀಡಿರುತ್ತಾರೆ

Exit mobile version