
ಬೆಳ್ತಂಗಡಿ; ಕಲೆ ಸಂಸ್ಕೃತಿ ರಕ್ಷಣೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮುಂಡಾಜೆ ಎಂಬ ಊರು ಹೆಸರುವಾಸಿಯಾಗಿದೆ. ಈಊರಿನಲ್ಲಿ ಸಂಘ ಸಂಸ್ಥೆಗಳು ಪ್ರಸಿದ್ದಿ ಪಡೆದಿದ್ದು ಊರಿನ ಬೆಳವಣಿಗೆಯಲ್ಲೂ ಕೊಡುಗೆ ನೀಡುತ್ತಿದೆ ಎಂದು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದರ ಬೆಳ್ತಂಗಡಿ ಘಟಕದ ಅಧ್ಯಕ್ಷ ಉಮೇಶ್ ಶೆಟ್ಟಿ ಹೇಳಿದರು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಲಯನ್ಸ್ ಕ್ಲಬ್ಇಂಟರ್ನ್ಯಾಷನಲ್ ಇದರ ಸಹಯೋಗದೊಂದಿಗೆ ಅ.8 ರಂದು ಮುಂಡಾಜೆಯಲ್ಲಿ ನಡೆದ ತಾಲೂಕು ಮಟ್ಟದ ಕೇರಂ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಮಾದ್ಯಮ ಕಾರ್ಯದರ್ಶಿ ಲ. ಅಶ್ರಫ್ ಆಲಿಕುಂಞಿ ಮಾತನಾಡಿ, ಸುವರ್ಣ ಮಹೋತ್ಸವ ವರ್ಷದಲ್ಲಿರುವ ಲಯನ್ಸ್ ಕ್ಲಬ್ ಸಣ್ಣ ಸಣ್ಣ ಸೇವಾ ಚಟುವಟಿಕೆಗಳ ಮೂಲಕ 500 ಕಾರ್ಯಕ್ರಮಗಳ ಗುರಿಯೊಂದಿಗೆ ಮುನ್ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ ಒಕ್ಕಲಿಗ ಗೌಡರ ಸಂಘದ ತಾ. ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳಾದ ಕಸ್ತೂರಿ ಕೇಶವ ಪೂಜಾರಿ, ಪುಷ್ಪರಾಜ, ಹರಿಪ್ರಸಾದ್ ಭಟ್ ಹಿತ್ತಿಲಕೋಡಿ, ಪರಮೇಶ್ವರ, ರಾಜು, ಹೇಮಂತ ಶೆಟ್ಟಿ, ಶಾಲಿನಿ, ಡಾ. ಶಿವಾನಂದ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ಲ. ನಾಮದೇವ ರಾವ್ ಕಾರ್ಯಕ್ರಮ ಸಂಯೋಜಿಸಿದರು.
ನಿರ್ದೇಶಕ ಉದಯ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ ನಾಯ್ಕ್ ವಂದಿಸಿದರು.
ಪಂದ್ಯಾಟದಲ್ಲಿ ತಾಲೂಕಿನಿಂದ 16 ತಂಡಗಳು ಭಾಗವಹಿಸಿದ್ದವು.ವಿಜೇತರಿಗೆ ನಗದು ಬಹುಮಾನದೊಂದಿಗೆ ಚಾಲೆಂಜರ್ಸ್ ಟ್ರೋಫಿ ವಿತರಿಸಲಾಯಿತು.