Site icon Suddi Belthangady

ಮುಂಡಾಜೆ ಬಂಟರ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ

ಮುಂಡಾಜೆ: ಅ.8ರಂದು ಮುಂಡಾಜೆ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆಯು ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ನೆರವೇರಿತು.

ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಯರಾಮ ಶೆಟ್ಟಿ, ಮುಂಡಾಡಿ ಗುತ್ತು, ಅಧ್ಯಕ್ಷರು, ಬಂಟರ ಸಂಘ ಬೆಳ್ತಂಗಡಿ ಇವರು ಮಾತನಾಡಿ ಜಾತಿ ಸಂಘಟನೆಗಳು ಸಮಾಜಕ್ಕೆ ಶಕ್ತಿಯಾಗಿ ನಿಲ್ಲಬೇಕು ಮತ್ತು ಯುವಕರಲ್ಲಿ ಜವಾಬ್ದಾರಿಯನ್ನು ಬೆಳೆಸುವಂತೆ ಪ್ರೋತ್ಸಾಹಿಸಬೇಕು ಎಂದು ನುಡಿದರು.

ಉಮೇಶ್ ಶೆಟ್ಟಿ ,ಅಧ್ಯಕ್ಷರು ,ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರು ಮಾತನಾಡಿ ಕುಟುಂಬದಲ್ಲಿ ಒಗ್ಗಟ್ಟಿದ್ದರೆ ಸಮಾಜದಲ್ಲಿ ತನ್ನಷ್ಟಕ್ಕೆ ಒಗ್ಗಟ್ಟು ಮೂಡುತ್ತದೆ ಎಂದರು.

ವೇದಿಕೆಯಲ್ಲಿ ವನಿತಾ ಶೆಟ್ಟಿ ,ಅಧ್ಯಕ್ಷರು ,ಉಜಿರೆ ವಲಯ ಬಂಟರ ಸಂಘ, ಪುರುಷೋತ್ತಮ ಶೆಟ್ಟಿ ಅಗರಿ ,ಅಧ್ಯಕ್ಷರು, ಬಂಟರ ಗ್ರಾಮ ಸಮಿತಿ ಮುಂಡಾಜೆ, ಬೆಳ್ತಂಗಡಿ ಬಂಟರ ಸಂಘದ ಕಾರ್ಯದರ್ಶಿ ಸಂಜೀವ ಶೆಟ್ಟಿ ಕುಂಠಿನಿ, ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಸಂಚಾಲಕರಾದ ವಿಶ್ವನಾಥ ಶೆಟ್ಟಿ ಮಂಡ್ರುಪಾಡಿ, ಯುವ ವಿಭಾಗದ ಕಾರ್ಯದರ್ಶಿ ಸುಮಾ ಕೃಷ್ಣಾನಂದ ಶೆಟ್ಟಿ, ಕಾರ್ಯದರ್ಶಿ ವಿಜಯಕುಮಾರ್ ರೈ ಇವರುಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಜಯಕುಮಾರ್ ರೈ ಇವರು ವರ್ಷದ ಚಟುವಟಿಕೆಗಳ ವರದಿಯನ್ನು ವಾಚಿಸಿದರು.

ಜೊತೆ ಕಾರ್ಯದರ್ಶಿ ನವೀತ್ ಶೆಟ್ಟಿ ನೆಯ್ಯಾಲು ಇವರು ಸ್ವಾಗತಿಸಿ, ಸಂಘದ ಸಲಹೆಗಾರರಾದ ಬಾಲಕೃಷ್ಣ ಶೆಟ್ಟಿ ಹೊಸ ಗದ್ದೆ ಇವರು ಧನ್ಯವಾದ ನೀಡಿದರು.

ಹರ್ಷಿತ್ ಶೆಟ್ಟಿ, ನೆಯ್ಯಾಲು ನಿರೂಪಿಸಿ, ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಇವರು ಪ್ರಾರ್ಥಿಸಿದರು.

ಕಾರ್ಯಕ್ರಮ ಮುಗಿದ ಬಳಿಕ ತಾಲೂಕಿನ ವಿಜೇತ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.ಇದರ ನೇತೃತ್ವವನ್ನು ನಿರಂಜನ ಶೆಟ್ಟಿ ಮತ್ತು ಕಿರಣ್ ಶೆಟ್ಟಿ ಇವರು ವಹಿಸಿಕೊಂಡಿದ್ದರು.

ಗ್ರಾಮ ಸಮಿತಿಯ ಎಲ್ಲಾ ಬಂಟ ಬಂಧುಗಳು ತುಂಬು ಹೃದಯದ ಸಹಕಾರ ನೀಡಿದರು.

Exit mobile version