Site icon Suddi Belthangady

ಕೊಯ್ಯೂರು ಸ.ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘಕ್ಕೆ ಅಧ್ಯಕ್ಷರಾಗಿ ಕೇಶವ ಗೌಡ, ಪ್ರ.ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್, ಕೋಶಾಧಿಕಾರಿಯಾಗಿ ಲೋಕೇಶ್ ಗೌಡ ಆಯ್ಕೆ

ಕೊಯ್ಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆದೂರು ಪೆರಲ್ ಕೊಯ್ಯೂರು ಇಲ್ಲಿಯ ಹಳೆ ವಿದ್ಯಾರ್ಥಿಗಳ ಮತ್ತು ಅಮೃತ ಮಹೋತ್ಸವ ಸಮಿತಿಯ ಹಾಗೂ ಊರವರ ಸಭೆಯು ಇತ್ತೀಚೆಗೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಮುಂದಿನ ವರ್ಷ ಶಾಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿರುವುದರಿಂದ ಈ ಶಾಲೆಯಲ್ಲಿ ಕಲಿತಂತಹ ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗುಡಿಸಲು ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸುವುದು ಉತ್ತಮವೆಂಬ ಎಲ್ಲರ ಅಭಿಪ್ರಾಯದಂತೆ ಸುಮಾರು 74 ವರ್ಷಗಳ ಇತಿಹಾಸವುಳ್ಳ ಈ ಶಾಲೆಯಲ್ಲಿ ಪ್ರಥಮ ಬಾರಿಗೆ ಹಳೆ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.

ಅದರಂತೆ ಹಳೆ ವಿದ್ಯಾರ್ಥಿ ಸಂಘದ ಪ್ರಥಮ ಅಧ್ಯಕ್ಷರಾಗಿ ಕೇಶವ ಗೌಡ ಕಂಗಿತ್ತಿಲು, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಸಾಲ್ಯಾನ್, ಗೌರವಾಧ್ಯಕ್ಷರಾಗಿ ಜಯರಾಮ್ ಭಟ್ ಕೋರ್ಯಾರ್, ಸಂಚಾಲಕರಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಬಳಿರಾಮ ಲಮಾಣಿ, ಕೋಶಾಧಿಕಾರಿಯಾಗಿ ಲೋಕೇಶ್ ಗೌಡ ಕೋರ್ಯಾರು, ಉಪಾಧ್ಯಕ್ಷರುಗಳಾಗಿ ಕೂಸಪ್ಪ ಗೌಡ ನಾಗನೋಡಿ ಹಾಗೂ ಮಾಯಿಲಪ್ಪ ಗೌಡ ಉಮಿಯ, ಕಾರ್ಯದರ್ಶಿಗಳಾಗಿ ಮೋಹನ ಪೂಜಾರಿ ಬಜ, ಅನುಷಾ ಕೆರೆ ಹಿತ್ತಿಲು, ಭಾರತಿ ಬೊಳೋಳಿ, ಕುಮಾರಿ ವೀಣಾ ಕೋಡ್ಯೆಲು, ಪದ್ಮನಾಭ ಗೌಡ ಬೊಳೋಳಿ, ಇಸುಬು ಸುಣ್ಣಾಲು, ಸಂಘಟನಾ ಕಾರ್ಯದರ್ಶಿಗಳಾಗಿ ದಿಲೀಪ್ ಕುಮಾರ್ ಮೈಂದ ಕೋಡಿ, ಚಂದ್ರಶೇಖರ ಕೋರಿಯಾರು, ಸೇಸಪ್ಪ ಅಡಿಲು, ರವಿ ಪಾಂಬೇಲು ಮೊದಲಾದವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಊರಿನ ಹಿರಿಯರು ಶಾಲೆಯ ಹಳೆ ವಿದ್ಯಾರ್ಥಿಗಳು ಆದ ಪ್ರಚಂಡ ಭಾನು ಭಟ್ ಪಾಂಬೆಲ್, ಅಶೋಕ್ ಕುಮಾರ್ ಅಗ್ರಶಾಲೆ, ಬಾಲಕೃಷ್ಣ ಪೂಜಾರಿ ಬಜ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ವಿನಯ ಕುಮಾರ್ ಕೆ, ಗ್ರಾ.ಪಂ.ಸದಸ್ಯರು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಲೋಕೇಶ್ ಗೌಡ ಪಾಂಬೇಲು, ಕಾರ್ಯಾಧ್ಯಕ್ಷರಾದ ಮಹಮ್ಮದ್ ಹಾರೂನ್ ಬಜಿಲ, ಗ್ರಾ.ಪಂ.ಉಪಾಧ್ಯಕ್ಷರಾದ ಹರೀಶ ಗೌಡ ಬಜಿಲ, ಸದಸ್ಯರಾದ ಇಸುಬು ಸುಣ್ಣಾಲು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ, ಎಸ್‌ಡಿಎಂ ಕಾಲೇಜಿನ ಉಪನ್ಯಾಸಕರಾದ ದಿವಾ ಕೊಕ್ಕಡ, ಬೈಪಾಡಿ ಪ್ರೌಢಶಾಲಾ ಅಧ್ಯಾಪಕರಾದ ವಿಜಯಕುಮಾರ್ ಎಂ., ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ಕೇಶವ ಗೌಡ ಕೊಂಗೊಜೆ, ವೆಂಕಣ್ಣ ಆದೂರುಪೆರಾಲ್ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ಊರವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಬಳಿರಾಮ ಲಮಾಣಿ ಅವರು ಸ್ವಾಗತಿಸಿ, ಕೊನೆಯಲ್ಲಿ ನೂತನ ಕಾರ್ಯದರ್ಶಿಯಾದ ಪಿ.ಚಂದ್ರಶೇಖರ್ ಸಾಲ್ಯಾನ್ ವಂದಿಸಿದರು.

Exit mobile version