Site icon Suddi Belthangady

ಉಜಿರೆ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದ.ಕ., ಉಡುಪಿ ಅಂತರ್ ಜಿಲ್ಲಾ ಪುರುಷರ ಮ್ಯಾಟ್ ಕಬ್ಬಡಿ ಪಂದ್ಯಾಟ ಉದ್ಘಾಟನೆ

ಉಜಿರೆ: ಶ್ರೀ ಧ.ಮ.ಪಾಲಿಟೆಕ್ನಿಕ್ ಸಂಸ್ಥೆಯ ಅತಿತ್ಯದಲ್ಲಿ ಅ.6 ರಂದು ದ.ಕ.ಮತ್ತು ಉಡುಪಿ ಅಂತರ್ ಜಿಲ್ಲಾ ಪಾಲಿಟೆಕ್ನಿಕ್ ಕಾಲೇಜುಗಳ ಮ್ಯಾಟ್ ಕಬ್ಬಡಿ ಪಂದ್ಯಾಟದ ಉದ್ಘಾಟನೆ ಕಾಲೇಜು ಒಳಾಂಗಣದಲ್ಲಿ ನಡೆಯಿತು.

ಅಂತರಾಷ್ಟ್ರೀಯ ಕಬ್ಬಡಿ ಮಾಜಿ ಆಟಗಾರ ಎಷ್ಯಾನ್ ಗೋಲ್ಡ್ ಮೇಡಲಿಸ್ಟ್, ಪ್ರೊ ಕಬಡ್ಡಿ ತರಬೇತುದಾರ ಜಗದೀಶ್ ಕುಂಬ್ಳೆ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಸಂತೋಷ ವಹಿಸಿದ್ದರು.ಎಸ್.ಡಿ.ಎಂ.ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಮೇಶ್ ಹೆಚ್., ರಾಷ್ಟ್ರೀಯ ಕಬ್ಬಡಿ ಕಬ್ಬಡಿ ತರಬೇತುದಾರ ಕೃಷ್ಣಾನಂದ ರಾವ್ ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್, ಮೆನೇಜರ್ ಚಂದ್ರಕಾಂತ್ ಜೈನ್, ದೈಹಿಕ ಶಿಕ್ಷಣ ನಿರ್ದೇಶಕರು, ಉಪನ್ಯಾಸಕರು, ಸಿಬ್ಬಂದಿಗಳು ವಿದ್ಯಾರ್ಥಿಗಳು, ವಿವಿಧ ಕಾಲೇಜಿನ ತಂಡಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಜಗದೀಶ್ ಕುಂಬ್ಳೆಯವರನ್ನು ಗೌರವಿಸಲಾಯಿತು.

Exit mobile version