ಉಜಿರೆ: ರಾಜ್ಯಮಟ್ಟದ ಅಮೆಚೂರು ಅಥ್ಲೆಟಿಕ್ಸ್ ಕ್ರೀಡಾಕೂಟವು ಸೆ.27 ರಿಂದ ಸೆ.30ರ ವರೆಗೆ ಮಂಗಳ ಸ್ಟೇಡಿಯಂ ಮಂಗಳೂರುನಲ್ಲಿ ನಡೆಯಿತು.
18 ವಯೋಮಾನದ ಪುರುಷರ ವಿಭಾಗದ ಶಾರ್ಟ್ ಪುಟ್ ವಿಭಾಗದಲ್ಲಿ 15.86ಮೀ ಅಂತರದಲ್ಲಿ ಆಕಾಶ್ ಕುಂದರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಲಾಂಗ್ ಜಂಪ್ ವಿಭಾಗದಲ್ಲಿ ಉಜ್ವಲ್ ಚಿನ್ನದ ಪದಕ ಪಡೆದಿದ್ದಾರೆ.ದರ್ಶನ್ ಲಾಂಗ್ ಜಂಪ್ ವಿಭಾಗದಲ್ಲಿ ಕಂಚಿನ ಮತ್ತು ತ್ರಿವಿಧ ಜಿಗಿತದಲ್ಲಿ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ. 18 ವಯೋಮಾನದ ಮಹಿಳಾ ವಿಭಾಗದ ಶಾರ್ಟ್ ಪುಟ್ ವಿಭಾಗದಲ್ಲಿ ಲಾಂಛನ ಕಂಚಿನ ಪದಕ ಪಡೆದುಕೊಂಡಿದ್ದಾರೆ.
23 ವಯೋಮಾನದ ಮಹಿಳಾ ವಿಭಾಗದಲ್ಲಿ ಜಾನ್ವಿ ಶೆಟ್ಟಿ ಹೆಪ್ಟೋತ್ಲೌನ್ ನಲ್ಲಿ ಕಂಚಿನ ಪದಕವನ್ನೂ ಪಡೆದುಕೊಂಡಿದ್ದಾರೆ.
ಆಕಾಶ್ ಕುಂದರ್ ಹಾಗೂ ಉಜ್ವಲ್ ತೆಲಂಗಾಣದಲ್ಲಿ ನಡೆಯುವ ದಕ್ಷಿಣ ವಲಯದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.
ಇವರಿಗೆ ಸಂದೇಶ್ ಪೂoಜಾ ತರಬೇತಿಯನ್ನು ನೀಡಿರುತ್ತಾರೆ ಹಾಗೂ ಕ್ರೀಡಾ ಸಂಘದ ಕಾರ್ಯದರ್ಶಿ, ರಮೇಶ್ ಹೆಚ್ ಸಹಕರಿಸಿದ್ದಾರೆ.