ಪುಂಜಾಲಕಟ್ಟೆ: ಅ.02ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ರೆಡ್ ರಿಬ್ಬನ್ ಕ್ಲ ಬ್, ರೋವರ್ಸ್ ಮತ್ತು ರೇಂಜರ್ಸ್ ಮತ್ತು ಭಾರತೀಯ ಯುವ ರೆಡ್ ಕ್ರಾಸ್ ಇದರ ವತಿಯಿಂದ ‘ಮಹಾತ್ಮ ಗಾಂಧೀಜಿ’ ಮತ್ತು ‘ಲಾಲ್ ಬಹದ್ದೂರ್ ಶಾಸ್ತ್ರೀ’ ಇವರ ಜನ್ಮ ದಿನವನ್ನು ಆಚರಿಸಲಾಯಿತು.
ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ನಮನ ಸಲ್ಲಿಸಿದ ಬಳಿಕ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಕೆ.ಶರತ್ ಕುಮಾರ್ ಇವರು ಗಾಂಧಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟರು.ಗಾಂಧಿ ಜಯಂತಿಯ ಪ್ರಯುಕ್ತ ಕಾಲೇಜು ಆವರಣ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಸೇರಿ ಶ್ರಮದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ಅವಿತ ಮರಿಯ ಕ್ವಾಡ್ರಸ್, ರಾ.ಸೇ.ಯೋ.ಯೋಜನಾಧಿಕಾರಿಯಾದ ಪ್ರೊ.ಚಿತ್ರಾ ಪಡಿಯಾರ್, ಭಾರತೀಯ ಯುವ ರೆಡ್ ಕ್ರಾಸ್ ಸಂಚಾಲಕರಾದ ಡಾ.ವೈಶಾಲಿ ಯು, ರೇಂಜರ್ರ್ಸ್ ಲೀಡರ್ ಆದಂತಹ ಡಾ.ಪ್ರೀತಿ ಕೆ.ರಾವ್ ಹಾಗೂ ಬೋಧಕ- ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ರಾ.ಸೇ.ಯೋ.ಯ ಪದಾಧಿಕಾರಿಯಾದ ರೇಖಾ, ಭಾರತೀಯ ಯುವ ರೆಡ್ ಕ್ರಾಸ್ ನ ನಾಯಕಿಯಾದ ನೇತ್ರಾ ಮತ್ತು ರೇಂಜರ್ಸ್ ವಿದ್ಯಾರ್ಥಿನಿಯಾದ ಶೃತಿ ಇವರು ನಿರೂಪಿಸಿದರು.