Site icon Suddi Belthangady

ಸಾವ್ಯ: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿರವರ ಜನ್ಮದಿನಾಚರಣೆ

ಸಾವ್ಯ: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿರವರ ಜಯಂತಿಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ದಯಾನಂದ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಹೆಗ್ಡೆ rvru ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ತಿಳಿಸಿದರು.

ಗಣ್ಯರಿಂದ ಪುಷ್ಪಾರ್ಚನೆ, ಸರ್ವಧರ್ಮ ಪ್ರಾರ್ಥನೆ, ಮಕ್ಕಳು ಭಾಷಣ ಮಾಡಿದರು.ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಸ್ವಾಗತಿಸಿ, ವಂದಿಸಿದರು.ನಾರಾವಿ ವಲಯ ಮಟ್ಟದ ಕ್ರೀಡಾ ವಿಜೇತರನ್ನು ಪ್ರಶಸ್ತಿ ಪತ್ರ, ಪದಕ ನೀಡಿ ಗೌರವಿಸಲಾಯಿತು.

ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಮಕ್ಕಳು, ಶಾಲಾ ಸುತ್ತಮುತ್ತ ಸ್ವಚ್ಛತೆಯನ್ನು ಕೈಗೊಂಡರು.ಎಸ್‌.ಡಿ.ಎಂ.ಸಿ ಸದಸ್ಯ ಶುಭಕರ, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಮಕ್ಕಳಿಗೆ ಲಾಡು, ಪಾಯಸ ನೀಡಲಾಯಿತು.

Exit mobile version