Site icon Suddi Belthangady

ಲಾಯಿಲ: ಶ್ರೀ ಕ್ಷೇತ್ರ ಕುದ್ರೋಳಿ ಅಧ್ಯಕ್ಷರು, ಗುರುಬೆಳದಿಂಗಳು ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಇವರು ದಯಾ ವಿಶೇಷ ಶಾಲೆಗೆ ಭೇಟಿ

ಲಾಯಿಲ: ದಯಾ ವಿಶೇಷ ಶಾಲೆಗೆ ಕುದ್ರೋಳಿ ಕೋಶಾಧಿಕಾರಿ, ಶ್ರೀ ಕ್ಷೇತ್ರ ಕುದ್ರೋಳಿ ಅಧ್ಯಕ್ಷರು, ಗುರುಬೆಳದಿಂಗಳು ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಿ.ಸಿ ಬೆಂಗಳೂರು ಪದ್ಮರಾಜ್ ಆರ್ ಇವರು ಬೆಳ್ತಂಗಡಿಯ ಮಾರ್ಗವಾಗಿ ಹೋಗುತ್ತಿರುವ ಸಂದರ್ಭದಲ್ಲಿ ದಯಾ ವಿಶೇಷ ಶಾಲೆಗೆ ಅ.03ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ವಿಶೇಷ ಮಕ್ಕಳಿಗೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.

ವಿಶೇಷ ಮಕ್ಕಳ ಸೇವೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.ವಿಶೇಷ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುವುದು ಎಲ್ಲಾರ ಕರ್ತವ್ಯವಾಗಿದೆ, ವಿಶೇಷ ಮಕ್ಕಳಿಗೆ ಸ್ಪಂದಿಸಲು ನಾನು ಸದಾ ಉತ್ಸುಕನಾಗಿದ್ದೇನೆ, ಅದೇ ಅಲ್ಲದೇ ಈ ದಿನದ ಊಟೋಪಚಾರದ ಖರ್ಚನ್ನು ಒದಗಿಸುತ್ತೇನೆ ಎಂದರು.

ಸಂಸ್ಥೆಯಲ್ಲಿ ದುಡಿಯುವ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕೇತರರ ಸೇವೆಯನ್ನು ಶ್ಲಾಘಿಸಿ ಧನ್ಯವಾದವಿತ್ತರು.ಸಂಸ್ಥೆಯ ನಿರ್ದೇಶಕರು ಮಾತನಾಡಿ ಅದೇಷ್ಟೋ ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ ಕಡೇ ಈ ಕಡೇ ಪ್ರಯಾಣಿಸುತ್ತಾರೆ.ಆದರೆ ಪದ್ಮರಾಜ್ ಆರ್ ರವರು ತಮ್ಮ ವಾಹನವನ್ನು ನಿಲ್ಲಿಸಿ ದಯಾ ವಿಶೇಷ ಶಾಲೆಯ ಮಕ್ಕಳಿಗೆ ಭೇಟಿ ಕೊಟ್ಟದ್ದು ಮಾನವೀಯತೆಯನ್ನು ಎದ್ದು ತೋರಿಸುತ್ತದೆ ಎಂದು ಅವರ ಸ್ವಭಾವವನ್ನು ಪ್ರಶಂಸಿದರು.

ರಮೇಶ್ ಧನ್ಯವಾದವಿತ್ತರು.

Exit mobile version