ಪೆರಿಂಜೆ: ಗ್ರಾಮ ಪಂಚಾಯತ್ ಹೊಸಂಗಡಿ, ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ವಿಜಯ ಗ್ರಾಮಾಭಿವೃದ್ದಿ ಪ್ರತಿಷ್ಟಾನ ಹೊಸಂಗಡಿ ,ಇನ್ನರ್ ವೀಲ್ ಕ್ಲಬ್ ಮೂಡಬಿದಿರೆ ಮತ್ತು ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಸಹಭಾಗಿತ್ವದೊಂದಿಗೆ ನೆಲ ಜಲ ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ನನ್ನ ಗಿಡ ನನ್ನ ಮರ ನನ್ನ ನೆಲ ನನ್ನ ಜಲ ಸಪ್ತಾಹ ಕಾರ್ಯಕ್ರಮದ ಸಮಾರೋಪ ಅ.2ರಂದು ಪೇರಿಯ ಪ್ರೇರಣಾ ಸೌಧದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಶ್ರೀ ಧವಳ ಕಾಲೇಜು ಉಪನ್ಯಾಸಕ ಸಂತೋಷ್ ಶೆಟ್ಟಿ, ಪೆರಾಡಿ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸೀತಾರಾಮ ರೈ, ಹಿರಿಯರಾದ ಪದ್ಮರಾಜ ಪೇರಿ, ರೋ.ರಾಜೇಶ್ ನೆಲ್ಯಾಡಿ, ಪಂಚಾಯತ್ ಸದಸ್ಯರಾದ ಹರಿಪ್ರಸಾದ್, ಶಾಂತ, ಸಂಜೀವಿನಿ ಯೋಜನೆಯ ತಾಲೂಕು ಸಂಯೋಜಕ ನಿತೀಶ್, ಆರೋಗ್ಯ ಕಾರ್ಯಕರ್ತೆ ರಕ್ಷಿತಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು , ಗ್ರಾಮಸ್ಥರು, ಆಳ್ವಾಸ್ ಸಮಾಜ ಕಾರ್ಯ ವಿದ್ಯಾರ್ಥಿಗಳು, ಪಿಡಿಒ ಗಣೇಶ್ ಶೆಟ್ಟಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಹರಿಪ್ರಸಾದ್ ಪಿ. ಸ್ವಾಗತಿಸಿ ಸಪ್ತಾಹ ಕಾರ್ಯಕ್ರಮ ಔಚಿತ್ಯ ಮತ್ತು ನಡೆಸಲಾದ ಕಾರ್ಯಕ್ರಮಗಳ ವಿವರ ನೀಡಿದರು.ಗಾಂಧೀಜಿಯವರ ಪ್ರತಿಮೆಗೆ ಪುಸ್ಪಾರ್ಚನೆ ಮಾಡಲಾಯಿತು.
ಉಪನ್ಯಾಸಕ ಸಂತೋಷ್ ಶೆಟ್ಟಿಯವರು ಗಾಂಧೀಜಿಯವರ ವಿಚಾರಧಾರೆಗಳ ಪ್ರಸ್ತುತತೆ ಬಗ್ಗೆ ವಿವರಿಸಿದರು.ನರೇಗಾ ಯೋಜನೆ ಬಗ್ಗೆ ಪಿಡಿಒ ವಿವರಿಸಿದರು 2023/24 ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾಯೋಜನೆ ತಯಾರಿಸಲಾಯಿತು.ನನ್ನ ಗಿಡ ನನ್ನ ಮರ ಯೋಜನೆಯಡಿ ಭಾಗವಹಿಸಿದ ಎಲ್ಲರಿಗೂ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಪೇರಿ ಆಟದ ಮೈದಾನದ ಬಳಿ ಸಾರ್ವಜನಿಕ ಶೌಚಾಲಯ ಕಾಮಗಾರಿಗೆ ಅಧ್ಯಕ್ಷರು ಶಿಲಾನ್ಯಾಸ ಮಾಡಿದರು.ಪೇರಿ ಅಂಗನವಾಡಿಯ ಪೌಷ್ಠಿಕ ತೋಟವನ್ನು ಪುನಶ್ಚೇತನಗೊಳಿಸಲಾಯಿತು.