Site icon Suddi Belthangady

ಉಜಿರೆ: ಸಂತ ಚರ್ಚ್‌ನ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಶಿಬಿರ

ಉಜಿರೆ: ಉಜಿರೆ ಸಂತ ಚರ್ಚ್‌ನ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಶಿಬಿರವನ್ನು ಅ.01ರಂದು ಸ್ತ್ರೀ ಸಂಘಟನೆಯ ಮುಂದಾಳತ್ವದಲ್ಲಿ ಆರೋಗ್ಯ ಆಯೋಗ ಹಾಗೂ ಸ್ತ್ರೀಯರ ಆಯೋಗದ ಜಂಟಿ ಆಶ್ರಯದೊಂದಿಗೆ ಏರ್ಪಡಿಸಲಾಗಿತ್ತು.

ಈ ಮಾಹಿತಿ ಶಿಬಿರದಲ್ಲಿ ಡಾ|ಆನ್ ಗ್ರೇಸ್ ಎಮ್.ಬಿ.ಬಿ.ಎಸ್, ಎಮ್.ಎಸ್. ರವರು ಆಗಮಿಸಿ, ಮಹಿಳೆಯರಿಗೆ Breast Cancer ಹಾಗೂ Cervix Cancer ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ಫಾ|ಜೇಮ್ಸ್ ಡಿ ಸೋಜಾ ಅನುಗ್ರಹ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಫಾ|ವಿಜಯ್ ಲೋಬೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್, ಕಾರ್ಯದರ್ಶಿಗಳಾದ ಲಿಗೋರಿ ವಾಸ್, ಧರ್ಮಭಗಿನಿಯಾದ ಸಿ|ವಲ್ಸಾ, ಬೆಳ್ತಂಗಡಿ ವಾರಾದೊ ಸ್ತ್ರೀ ಸಂಘಟನೆಯ ಅಧ್ಯಕ್ಷರಾದ ಶ್ರೀಮತಿ ಗ್ರೇಸಿ ಲೋಬೋ, ಚರ್ಚ್‌ನ ಆಯೋಗಗಳ ಸಂಯೋಜಕರಾದ ಲವೀನಾ ಫೆರ್ನಾಂಡಿಸ್, ವಿವಿಧ ಆಯೋಗಗಳ ಆಯೋಜಕರಾದ ವಿಲಿಯಂ ಡಿ ಸೋಜಾ, ಮೆಲ್ವಿನ್ ಸಂತೋಷ್, ಸುನಿಲ್ ಮೊರಾಸ್, ವೀಣಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜೆಸಿಂತಾ ತಾರೊ ನಿರೂಪಿಸಿ, ವಿನ್ನಿ ಮರಿಯಾ ಸ್ವಾಗತಿಸಿದರು.

Exit mobile version