Site icon Suddi Belthangady

ರಾಜಕೇಸರಿ ಟ್ರಸ್ಟ್ ನಿಂದ 11 ಆಶ್ರಮಗಳಿಗೆ ಸಹಾಯ ಹಸ್ತ ಕಾರ್ಯಕ್ರಮ- ಸಮಾಜ ಸೇವಾ ಸಂಸ್ಥೆಗಳಿಗೆ ಸರಕಾರ ನೆರವು ನೀಡಬೇಕು: ಅರುಣ್ ಪುತ್ತಿಲ

ಬೆಳ್ತಂಗಡಿ: ಸಮಾಜ ಸೇವೆ ಮಾಡುವ ಚಿಂತನೆ ಎಲ್ಲರಲ್ಲಿ ಇರುವುದಿಲ್ಲ.ಸ್ವಾರ್ಥ ಬದುಕು ಸಾದಿಸುವವರೆ ಅದಿಕ.ಅದರೆ ಕಳೆದ 11 ವರ್ಷಗಳ ಹಿಂದೆ ನೊಂದವರ ಸೇವೆ ಮಾಡುವ ಕನಸನ್ನು ಕಂಡ ರಾಜಕೇಸರಿ ತಂಡದ ಸ್ಥಾಪಕಾದ್ಯಕ್ಷ ದೀಪಕ್.ಜಿ ಯವರ ಕನಸು ಸಮಾಜಕ್ಕೆ ಮಾದರಿಯಾಗಿದೆ.ಬಡ ಕುಟುಂಬಗಳಿಗೆ ಹತ್ತಾರು ಮನೆ ನಿರ್ಮಾಣ, ಅನಾಥರಿಗೆ ನೆರವು,ಬಡ ರೋಗಿಗಳಿಗೆ ನೆರವು,ರಕ್ತದಾನ, ಅನಾಥಾಶ್ರಮಗಳಿಗೆ ನೆರವು, ಸ್ವಚ್ಚತಾ ಕಾರ್ಯಕ್ರಮದಂತಹ ನೂರಾರು ಕಾರ್ಯಕ್ರಮ ಮಾಡಿ ಈ ತಂಡ ಸಾರ್ಥಕತೆಯನ್ನು ಕಂಡಿದೆ.ಇಂತಹ ಸಮಾಜ ಸೇವಾ ಸಂಸ್ಥೆಗೆ ಆದ್ಯತೆ ನೆಲೆಯಲ್ಲಿ ಸರಕಾರ ನೆರವು ನೀಡಬೇಕು ಮತ್ತು ದೀಪಕ್ ಜಿ ಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಹೇಳಿದರು.ಅವರು ಅ.1ರಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 542ನೆಯ ಸೇವಾ ಯೋಜನೆ ಅಂಗವಾಗಿ ನಾನಾ ತಾಲೂಕಿನ 11 ಅಶಕ್ತ ಆಶ್ರಮಗಳಿಗೆ ಅಕ್ಕಿ ವಿತರಣೆ, 11 ಅಶಕ್ತ ಬಡ ರೋಗಿಗಳಿಗೆ ವಸ್ತ್ರ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ 11 ವಿಧದ ಬಗೆಯ ಹಣ್ಣು ಹಂಪಲುಗಳ ಗಿಡಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರು ಕೈಜೋಡಿಸಬೇಕು.ಆ ಮೂಲಕ ಅವರ ಸೇವೆ ನೊಂದವರಿಗೆ ಸಿಗಬೇಕು.ಇದು ರಾಜ್ಯ ರಾಷ್ಡಮಟ್ಟದಲ್ಲಿ ನಡೆಯಲಿ ಇವರಿಗೆ ನನ್ನ ಸಂಪೂರ್ಣ ಸಹಕಾರ ಇದ್ದು ಮುಂದಿನ ದಿನದಲ್ಲಿ ನಾನು ಇಂತಹ ಕಾರ್ಯಗಳಿಗೆ ಕೈಜೋಡಿಸುತ್ತೆನೆ ಎಂದರು.

ಬೆಳ್ತಂಗಡಿ ಮೋಸ್ಟ್ ಹೋಲಿ ರೆಡಿಮೇಡ್ ಚರ್ಚ್ ಧರ್ಮಗುರು ಫಾ. ವಾಲ್ಟರ್ ಡಿಮೆಲ್ಲೊ ಮಾತನಾಡಿ ರಾಜಕೇಸರಿ ತಂಡದ ಕಾರ್ಯ ದೇವರು ಮೆಚ್ಚುವ ಕಾರ್ಯ.ಹನ್ನೊಂದು ವರ್ಷದ ಹಿಂದೆ ಈ ಸಂಘಟನೆ ಪ್ರಾರಂಬಿಸಿದ ಫಲವಾಗಿ ಇಂದು 542 ನೇ ಸೇವಾ ಕಾರ್ಯ ಮಾಡುವಂತಾಗಿದೆ.ಇದು ನಿರಂತರವಾಗಿ ನಡೆಯಲಿ.ಇದರ ಎಲ್ಲಾ ಸದಸ್ಯರ ಶ್ರಮ ಕ್ಕೆ ಎಲ್ಲರು ಕೈಜೋಡಿಸಬೇಕು ಎಂದರು.ಬಳಂಜ ಧರ್ಮಗುರು ಝಮೀರ್ ಸಅದಿ ಅಲ್ ಫಾಝಿಲ್, ಉಜಿರೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ರಾಜೇಶ್ ಕೋಟ್ಯಾನ್, ಪತ್ರಕರ್ತ ಮನೋಹರ ಬಳಂಜ, ತಾಲೂಕು ಆಸ್ಪತ್ರೆ ಕಚೇರಿಯ ವ್ಯವಸ್ಥಾಪಕ ಅಜಯ್, ಮದಿಮಯೆ ತುಳು ಚಲನಚಿತ್ರದ ತಂಡ,ಬಾಲ ನಟ ಅಮನ್ ಎಸ್.ಕರ್ಕೇರ, ರಾಜಕೇಸರಿ ತಂಡದ ಸ್ಥಾಪಕಾದ್ಯಕ್ಷ ದೀಪಕ್ ಜಿ, ಜಿಲ್ಲಾದ್ಯಕ್ಷ ಅಶೋಕ್ ಪೂಜಾರಿ ಮಾಲೆಮಾರ್, ಖ್ಯಾತಿ ನೃತ್ಯ ಕೊರಿಯೋಗ್ರಾಫರ್ ರಾಜೇಶ್ ಕಣ್ಣೂರು ಉಪಸ್ಥಿತರಿದ್ದರು.

ಟ್ರಸ್ಟ್ ಸದಸ್ಯ ಪ್ರೇಮ್ ರಾಜ್ ರೋಸನ್ ಸಿಕ್ವೇರಾ ಸ್ವಾಗತಿಸಿ ಅದ್ಯಕ್ಷ ಸಂದೀಪ್ ವಂದಿಸಿದರು.ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

Exit mobile version