ಪುಂಜಾಲಕಟ್ಟೆ: ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್, ನೈನಾಡು ಇದರ ಮುಂದಾಳತ್ವದಲ್ಲಿ ಅ.1ರಂದು ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನ ಜರುಗಿತು.
ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ವಠಾರದಿಂದ ಆರಂಭವಾದ ಅಭಿಯಾನ ಜಾತವು ಶಶಾಂಕ್ ಕ್ಯಾಶು ಫ್ಯಾಕ್ಟರಿವರೆಗೆ ಸಾಗಿ ನೈನಾಡು ಪರಿಸರದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತ್ತು.
ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷರಾಗಿ ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನ ಧರ್ಮ ಗುರುಗಳಾದ ವಂದಾನೀಯ ಫಾ! ಅನಿಲ್ ಅವಿಲ್ಡ್ ಲೋಬೋ ರವರು ಪ್ರಾಸ್ತಾವಿಕ ಭಾಷಣ ಮಾಡಿ precaution is better than cure (ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ) ಎಂದು ಹೇಳಿದರು. ಡ್ರಗ್ಸ್ ನಿಂದ ವ್ಯಕ್ತಿಗೆ, ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಆಗುವ ಸಮಸ್ಯೆಗಳಿಂದ ದೂರ ಇರುವುದು ಒಳಿತು ಎಂಬ ಮುನ್ನೆಚ್ಚರಿಕೆ ಮಾತುಗಳನ್ನಾಡಿ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮುಹಮ್ಮದ್ ಫಾಳಿಲಿ ಖತೀಬರು ಜುಮಾ ಮಸೀದಿ, ಉಳ್ತೂರು ಇವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಯುವಕ ಯುವತಿಯರು ಡ್ರಗ್ಸ್ ಜಾಲದಿಂದ ದೂರ ಇರುವಂತೆ ಕರೆ ನೀಡಿದರು.
ಡ್ರಗ್ಸ್ ವಿರೋಧ ಜಾಗೃತಿ ಅಭಿಯಾನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಮುನಪ್ಪ ಕೊರವರ ಮಾತಾಡಿ ಡ್ರಗ್ಸ್ ನಿಂದ ಆಗುವ ಕೆಟ್ಟ ಪರಿಣಾಮಗಳು, ಅದರಿಂದ ದೂರ ಇರಬೇಕಾದ ಅನಿವಾರ್ಯತೆ ಹಾಗೂ ಡ್ರಗ್ಸ್ ಮುಕ್ತ ಸಮಾಜವನ್ನು ಕಟ್ಟುವಲ್ಲಿ ನಮ್ಮೆಲ್ಲರ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ಮನದಟ್ಟಾಗುವ ರೀತಿಯಲ್ಲಿ ಜಾಗೃತಿಯನ್ನು ಮೂಡಿಸಿದರು.
ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾರದಾ ನೈನಾಡು, ವಸಂತ ಸಾಲಿಯಾನ್ ಅಧ್ಯಕ್ಷರು ಶ್ರೀರಾಮ ಯುವಕ ಸಂಘ ನೈನಾಡು, ಜಾರಪ್ಪ ಪೂಜಾರಿ ಪ್ರಮುಖರು ಶ್ರೀ ರಾಮ ಭಜನಾ ಮಂದಿರ ನೈನಾಡು, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೊ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಲ್ಯಾನ್ಸಿ ವಿಲಿಯಂ ಡಿಸೋಜಾ ಮತ್ತು ಕಾರ್ಯದರ್ಶಿ ಇನಾಸ್ ರೋಡ್ರಿಗಾಸ್ ಹಾಗೂ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ! ಮೋಂತಿಯವರು ಉಪಸ್ಥಿತರಿದ್ದರು.
ಐ.ಸಿ.ವೈ.ಎಂ ಸಂಘಟನೆಯ ಶ್ರೀ ಜೈಸನ್ ರೋಡ್ರಿಗಾಸ್ ಅವರು ಎಲ್ಲರನ್ನೂ ಸ್ವಾಗತಿಸಿದರು.ಐ.ಸಿ.ವೈ.ಎಂ ಅಧ್ಯಕ್ಷರಾದ ಆಸ್ಟಿನ್ ಲಸ್ರಾದೋರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಕುಮಾರಿ ಕೀರ್ತಿ ರೋಡ್ರಿಗಾಸ್ ರವರು ಧನ್ಯವಾದ ಸಮರ್ಪಿಸಿದರು.