Site icon Suddi Belthangady

ವಿಶ್ರಾಂತ ಧರ್ಮ ಗುರುವಿಗೆ ನೆಲ್ಯಾಡಿ ಅಲ್ಫೋನ್ಸ ಚರ್ಚ್ ನಲ್ಲಿ ಗುರು ದೀಕ್ಷೆಯ ಸುವರ್ಣ ಸಂಭ್ರಮ

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ 1981 ರಿಂದ 1986 ರ ಅವಧಿಯಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿ ಬೆಳ್ತಂಗಡಿ ಧರ್ಮ ಪ್ರಾಂತ್ಯ ದಲ್ಲಿ ಸುಮಾರು ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಫಾ. ಮಾತ್ಯು ಪೆರುಮ್ಪಳ್ಳಿ ಇವರನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.

ಗುರು ದೀಕ್ಷೆಯ ಸುವರ್ಣ ಸಂಭ್ರಮ ಆಚರಿಸುತ್ತಿರುವ ವಂದನಿಯ ಧರ್ಮ ಗುರುಗಳನ್ನು ಶಾಲು ಹೊದಿಸಿ ನೆನಪಿನ ಸ್ಮರಣೆಕೆಯನ್ನು ನೀಡಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಚರ್ಚ್ ನ ಟ್ರಸ್ತಿಗಳಾದ ಈಪನ್ ವರ್ಗೀಸ್, ಜೋಬಿನ್ ಶ್ರೀಟೋಮಿ, ಬಿಜು ವಂದನಿಯ ಸಿಸ್ಟೆರ್ ಲಿಸ್ ಮಾತ್ಯು ಉಪಸ್ಥಿತರಿದ್ದರು.

ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ಹಾಗೂ ಟೊಮಿ ಮಟ್ಟಮ್ ಶುಭ ಹಾರೈಸಿದರು.

Exit mobile version