ಬೆಳಾಲು : ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಮಾಯ ಇದರ 41 ನೇ ವರ್ಷದ ಮಹಾ ಸಭೆ ಅ.1 ರಂದು ಶ್ರೀ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪದಾಧಿಕಾರಿಗಳಾದ ಉಪಾಧ್ಯಕ್ಷ ಬಾಲಚಂದ್ರ ಆಚಾರ್ಯ, ಕೋಶಾಧಿಕಾರಿ ತೇಜಾಕ್ಷ, ಕ್ರೀಡಾ ಸಂಚಾಲಕ ಯತಿರಾಜ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಯಗುತ್ತು ಪುಷ್ಪದಂತ ಜೈನ್ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಿವಕುಮಾರ್ ಬಾರಿತ್ತಾಯ ಪಾರಳ, ಗೌರವ ಸಲಹೆಗಾರರಾದ ಜಾರಪ್ಪ ಪೂಜಾರಿ ಬೆಳಾಲು, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು, ಶೇಖರ ಗೌಡ ಕೊಲ್ಲಿಮಾರು, ಮೋಹನ ಗೌಡ ಊರೆಜ್ಜ, ಉಷಾದೇವಿ ಕಿನ್ಯಾಜೆ,ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಲಲಿತ ಮೋನಪ್ಪ ಗೌಡ, ಗೌರವ ಅಧ್ಯಕ್ಷೆ ಶೀಲಾವತಿ ಧರ್ಮೇಂದ್ರ ಕುಮಾರ್, ಭಜನಾ ಮಂಡಳಿಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಮಾಜಿ ಗೌರವಾಧ್ಯಕ್ಷ ವಸಂತ ಬಜಕ್ಕಳ ಸ್ವಾಗತಿಸಿದರು.ಕಾರ್ಯದರ್ಶಿ ಹರೀಶ್ ಆಚಾರ್ಯ ಕುದ್ರಾಲು ಲೆಕ್ಕ ಪತ್ರ ಮಂಡಿಸಿದರು.ಸದಸ್ಯ ಶೋಭಿತ್ ಪೆಲತ್ತಡಿ ವರದಿ ವಾಚಿಸಿದರು.ಜತೆ ಕಾರ್ಯದರ್ಶಿ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿ.ಮಾಜಿ ಕಾರ್ಯದರ್ಶಿ ಶಿವಕೀರ್ತಿ ವಂದಿಸಿದರು.
ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಭಜನಾ ಮಂಡಳಿಯ ಅಧ್ಯಕ್ಷರಾಗಿ ಹರೀಶ್ ಆಚಾರ್ಯ, ಕಾರ್ಯದರ್ಶಿಯಾಗಿ ಶಿವಪ್ರಸಾದ್, ಉಪಾಧ್ಯಕ್ಷರಾಗಿ ಶಶಿಧರ ಕೆ., ಜತೆ ಕಾರ್ಯದರ್ಶಿಯಾಗಿ ಶೋಭಿತ್ ಪೆಲತ್ತಡಿ, ಕೋಶಾಧಿಕಾರಿಯಾಗಿ ಗಣೇಶ್ ಕನಿಕ್ಕಿಲ, ಭಜನಾ ಸಂಚಾಲಕರಾಗಿ ಭವಾನಿ ಮಾರ್ಪಲು, ಸಹ ಸಂಚಾಲಕರಾಗಿ ಸುರೇಶ ಕನಿಕ್ಕಿಲ, ಕ್ರೀಡಾ ಸಂಚಾಲಕರಾಗಿ ಶಶಿಧರ ಆಚಾರ್ಯ ಶಿಲ್ಪಿ, ಸಹ ಸಂಚಾಲಕರಾಗಿ ರಂಜನ್ ಕುಮಾರ್, ಮಹಿಳಾ ಸಂಚಾಲಕರಾಗಿ ಸುಜಾತಾ ಮಂಜುಶ್ರೀ, ಸಹ ಸಂಚಾಲಕರಾಗಿ ವಸಂತಿ ಪರಾರಿ ಆಯ್ಕೆಯಾದರು
ಚುನಾವಣಾಧಿಕಾರಿಯಾಗಿ ಭಜನಾ ಮಂಡಳಿಯ ಮಾಜಿ ಕಾರ್ಯದರ್ಶಿ ಕೊಯ್ಯುರು ಸ. ಪ. ಪೂ. ಕಾಲೇಜು ಪ್ರಭಾರ ಪ್ರಾಂಶುಪಾಲ ಮೋಹನ ಗೌಡ ಕಾರ್ಯ ನಿರ್ವಹಿಸಿದರು.
ಪದಾಧಿಕಾರಿಗಳು, ಸದಸ್ಯರು ಭಕ್ತರು ಹಾಜರಿದ್ದು ಸಹಕರಿಸಿದರು.