Site icon Suddi Belthangady

ಚಾರ್ಮಾಡಿ ಘಾಟಿಯಲ್ಲಿ ಧರೆಗುರುಳಿದ ಬೃಹತ್ ಗಾತ್ರದ ಮರ- 3ಗಂಟೆಗೂ ಅಧಿಕ ಟ್ರಾಫಿಕ್ ಜಾಮ್- ಸ್ಥಳೀಯರಿಂದ ಮರ ತೆರವು

ಚಾರ್ಮಾಡಿ: ಚಾರ್ಮಾಡಿ ಘಾಟಿಯ ಎಂಟನೇ ತಿರುವಿನ ರಸ್ತೆಗೆ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಬೃಹತ್ ಗಾತ್ರದ ಮರ ಬಿದ್ದು ಮೂರು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮರ ಬಿದ್ದ ವಿಷಯ ತಿಳಿದಾಗ ಸ್ಥಳೀಯರಾದ ಮುಬಾಶಿರ್, ಹಸನಬ್ಬ ಚಾರ್ಮಾಡಿ, ಇಸ್ಮಾಯಿಲ್ ಚಾರ್ಮಾಡಿ, ಸಿನನ್ ಚಾರ್ಮಾಡಿ ಮುಂತಾದವರು ತೆರಳಿ ಮರ ತೆರವು ಮಾಡಲು ಮುಂದಾದರು.

ಈ ವೇಳೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದ ವಾಹನ ಚಾಲಕರೆಲ್ಲ ಸಹಕರಿಸಿದ್ದರಿಂದ ಸಂಜೆ 4.30ರ ಸುಮಾರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

Exit mobile version