Site icon Suddi Belthangady

ಮಲವಂತಿಗೆ: ಮೈರ್ನೋಡಿ ನಿವಾಸಿ ಶಶಿಧರ್ ರವರ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು- ದಿಡುಪೆಯ ಉರಗ ಪ್ರೇಮಿ ಕಿಶೋರ್ ಹೂರ್ಜೆ ಯವರಿಂದ ರಕ್ಷಣೆ

ಮಲವಂತಿಗೆ: ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮದ ಮೈರ್ನೋಡಿ ಎಂಬಲ್ಲಿ ಶಶಿಧರ್ ಮೈರ್ನೋಡಿ ರವರ ತೋಟದಲ್ಲಿ ಹೆಬ್ಬಾವು ಒಂದು ಕಾಣಿಸಿಕೊಂಡು ಶಾಲಾ ಕಾಲೇಜು ಮಕ್ಕಳು ಹೋಗುವ ದಾರಿ ಆಗಿರುವ ಕಾರಣ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿತ್ತು.ಹಳ್ಳಿಗಳಲ್ಲಿ ಹಾವು ಕಂಡುಬಂದರೆ ಕೆಲವರು ಅದನ್ನು ನೋಯಿಸುವ, ಕೊಲ್ಲುವ ಬಗ್ಗೆ ಯೋಚಿಸುತ್ತಾರೆ. ಆದರೆ ಇಲ್ಲಿಯ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದಾಗ ಯಾರು ಬಂದಿಲ್ಲ.ಆಗ ಸ್ಥಳೀಯರಾದ ಕಿಶೋರ್ ಕುಮಾರ್ ಹೂರ್ಜೆ, ಕಾರ್ಯಚರಣೆ ನಡೆಸಿ ಹಾವನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟರು.

ಈ ಬಾಗದಲ್ಲಿ ಅನೇಕ ಹಾವುಗಳನ್ನು ಹಿಡಿದು ಇವರು ಕಾಡಿಗೆ ಬಿಡುವ ಸೇವೆ ಮಾಡುತ್ತಿದ್ದಾರೆ.

ಇವರಿಗೆ ದಿನೇಶ್ ಮೇರ್ನೋಡಿ, ವಿನಯ ಮೈರ್ನೊಡಿ, ಕುಶಾಲಪ್ಪ, ಗಣೇಶ ಶಶಿಧರ್ ಮೈರ್ನೋಡಿ ಸಹಕರಿಸಿದರು.

Exit mobile version