Site icon Suddi Belthangady

ಉಜಿರೆ ಶ್ರೀ ಧ.ಮ.ಪ.ಪೂ.ಕಾಲೇಜು ರಾ.ಸೇ ಯೋಜನೆ: ವಿಶೇಷ ಕಾರ್ಯಾಗಾರ ಉದ್ಘಾಟನೆ

ಉಜಿರೆ: ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಪಡೆಯುವುದು ಮಾತ್ರವಲ್ಲ ನಾವು ಅದರಲ್ಲಿ ಹೇಗೆ ತೊಡಗಿಸಿಕೊಂಡಿದ್ದೇನೆ, ನನ್ನ ವ್ಯಕ್ತಿತ್ವಕ್ಕೆ ಯಾವ ವಿಷಯಗಳನ್ನು ಪಡೆದುಕೊಂಡಿದ್ದೇವೆ ಎನ್ನುವುದು ಮುಖ್ಯ.ಹೊಂದಾಣಿಕೆಯ ಜೀವನ, ಪರಸ್ಪರ ತಿಳುವಳಿಕೆ ಇತ್ಯಾದಿಗಳಿಗೆ ರಾ.ಸೇ ಯೋಜನೆಯ ಶಿಬಿರಗಳು ಪೂರಕ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ.ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ನಡೆದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆನಂತರ ನಡೆದ ಕಾರ್ಯಾಗಾರದಲ್ಲಿ ಹಿರಿಯ ಸ್ವಯಂ ಸೇವಕ ಧನುಷ್ ಕೆ.ಪಿ , ಶಶಿಕಿರಣ್ ಹಾಗೂ ಉಜಿರೆ ಶ್ರೀ ಧ.ಮಂ ಪದವಿ ಕಾಲೇಜಿನ ರಾ.ಸೇ ಯೋಜನೆಯ ಸ್ವಯಂ ಸೇವಕ ನಿಸರ್ಗ ಹಾಗೂ ಯಕ್ಷಿತ್ ಅವರು ವರದಿ ತಯಾರಿಕೆ, ಸಿಂಚನಾ ಅವರು ಕಾರ್ಯಕ್ರಮ ನಿರ್ವಹಣೆ ಬಗ್ಗೆ, ಅನಂತ್ ಅವರು ಭಿತ್ತಿಪತ್ರಿಕೆ ಬಗ್ಗೆ ಮಾಹಿತಿ ನೀಡಿದರು.ಭೂಮಿಕಾ ಹಾಗೂ ಅನೇಕ ಹಿರಿಯ ಸ್ವಯಂ ಸೇವಕರು ಸಹಕಾರ ನೀಡಿದರು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.

ಸ್ವಯಂ ಸೇವಕ ಆದಿತ್ಯ ನಿರೂಪಿಸಿ, ವಂದಿಸಿದರು.

Exit mobile version