ಉಜಿರೆ: ಪಾಲಿಟೆಕ್ನಿಕ್ ವಿದ್ಯಾರ್ಥಿಗಳಲ್ಲಿ ಕೌಶಲ್ಯಧಾರಿತ ವಿದ್ಯೆಯ ಜೊತೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಮಟ್ಟದ ಪಾಲಿಟೆಕ್ನಿಕ್ ಪುರುಷ ವಿದ್ಯಾರ್ಥಿಗಳಿಗೆ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾಟ ಆಯೋಜನೆ ಮಾಡಲಾಗಿದ್ದು ಇದೇ ಬರುವ ಅಕ್ಟೋಬರ್ ತಿಂಗಳ 4ರಂದು ವಾಲಿಬಾಲ್ ಹಾಗೂ 6ರಂದು ಕಬಡ್ಡಿ ಪಂದ್ಯಾಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ವಾಲಿಬಾಲ್ ಪಂದ್ಯಾಟದ ಉದ್ಘಾಟನೆಗಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿಯ ವಿದ್ಯಾರ್ಥಿಗಳನ್ನು ದಾಖಲೆಯ 9ನೆಯ ಬಾರಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ ವಿಶೇಷ ಸಾಧಕ, ವಾಲಿಬಾಲ್ ಕೋಚ್ ಪ್ರಶಾಂತ್ ಸುವರ್ಣ ಇವರು ಆಗಮಿಸಿ ಉದ್ಘಾಟನೆ ಮಾಡಲಿದ್ದಾರೆ.ಕಬಡ್ಡಿ ಪಂದ್ಯಾಟವನ್ನು ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ತ್ಯಾಗರಾಜ್ ಉದ್ಘಾಟಿಸಲಿದ್ದಾರೆ.ವಿಶೇಷ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಆಗಿರುವ ಸತೀಶ್ಚಂದ್ರ, ಲಕ್ಷ್ಮಿ ಗ್ರೂಪ್ಸ್ ನ ಮಾಲೀಕರಾದ ಮೋಹನ್ ಕುಮಾರ್, ಅಮೃತ್ ಟೆಕ್ಸ್ಟ್ ಟೈಲ್ಸ್ ನ ಮಾಲೀಕರಾದ ಪ್ರಶಾಂತ್, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ಸೋಮಶೇಖರ್ ಶೆಟ್ಟಿ, ಯುವರಾಜ್ ಜೈನ್, ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಬಡ್ಡಿ ಕೋಚ್ ಕೃಷ್ಣಾನಂದ್ ರಾವ್, ವಾಲಿಬಾಲ್ ಕೋಚ್ ಸುದಿನ್ ಇವರೆಲ್ಲ ಭಾಗವಹಿಸಲಿದ್ದಾರೆ.ಒಟ್ಟಾರೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 15 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ