Site icon Suddi Belthangady

ವಲಯ ಮಟ್ಟದ ಪ್ರಾಥಮಿಕ ವಿಭಾಗದ ಅಥ್ಲೆಟಿಕ್ಸ್ ಪಂದ್ಯಾಟ: ಸೈಂಟ್ ಪೀಟರ್ ಶಾಲೆಗೆ ಹಲವು ಬಹುಮಾನಗಳು

ಅಳದಂಗಡಿ: ಸಂತ ಪೌಲ್ ನಾರಾವಿ ಶಾಲೆಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಅಥ್ಲೆಟಿಕ್ಸ್ ಪಂದ್ಯಾಟದಲ್ಲಿ ಸೈಂಟ್ ಪೀಟರ್ ಕ್ಲೇವರ್ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.

8 ತರಗತಿ ವಿಭಾಗದಲ್ಲಿ ಉದ್ದ ಜಿಗಿತ ಸೃಜನ್ ಎಸ್ ಪ್ರಥಮ, ಲಿಯೋನಾರ್ಡ ತೃತೀಯ, 400 ಮತ್ತು 200 ಮೀಟರ್ ಓಟ ಅನ್ವಿಷಾ ಪ್ರಥಮ, 600 ಮೀಟರ್ ಓಟ ಲಿಯೋನಾರ್ಡ ಪ್ರಥಮ, 200ಮೀಟರ್ ಓಟ ಸೃಜನ್ .ಎಸ್ ತೃತೀಯ, 100 ಮೀಟರ್ ಓಟದಲ್ಲಿ ಲಿಯೋನ ದ್ವಿತೀಯ, ಚಕ್ರ ಎಸೆತ ಅಂಕಿತ ಪ್ರಥಮ,100 ಮೀಟರ್ ರಿಲೇ ಓಟ ದಲ್ಲಿ ಬಾಲಕರ ತಂಡ ದ್ವಿತೀಯ, ಪ್ರಾಥಮಿಕ ವಿಭಾಗದಲ್ಲಿ ಶ್ರಾವ್ಯ ತೃತೀಯ, ಗುಂಡು ಎಸೆತ ಅನುಷಾ ತೃತೀಯ, 400 ಮತ್ತು 600ಮೀಟರ್ ಓಟದಲ್ಲಿ ಶ್ರೇಯ ಪ್ರಥಮ, ಲೆನ್ವಿಟ ತೃತೀಯ,100 ಮೀಟರ್ ಓಟ ಶ್ರಾವ್ಯ ಪ್ರಥಮ, ಎತ್ತರ ಜಿಗಿತದಲ್ಲಿ ರಿಶಾಲ್ ದ್ವಿತೀಯ, 100 ಮೀಟರ್ ರಿಲೇ ಓಟ ದಲ್ಲಿ ಬಾಲಕಿಯರ ತಂಡ ಪ್ರಥಮ ಮತ್ತು ಪ್ರಾಥಮಿಕ ವಿಭಾಗದ ಉತ್ತಮ ಸಾಧನೆಗಾಗಿ ಶ್ರಾವ್ಯ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿರುತ್ತಾರೆ.

8ನೇ ತರಗತಿಯ ವಿಭಾಗ ಹಾಗೂ ಪ್ರಾಥಮಿಕ ವಿಭಾಗದ ಬಾಲಕಿಯರು ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಕೇವನ್ ರವರು ತರಬೇತಿ ನೀಡಿರುತ್ತಾರೆ.

Exit mobile version