Site icon Suddi Belthangady

ಬೆಳ್ತಂಗಡಿ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ತಡೆಗಟ್ಟುವ ಲಸಿಕಾ ಅಭಿಯಾನದ ಚಾಲನೆ- ಪಶು ಸಖಿಯವರಿಗೆ ಇಲಾಖೆಯಿಂದ ಕಿಟ್ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ

ಬೆಳ್ತಂಗಡಿ: ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳ್ತಂಗಡಿ ಇವರ ವತಿಯಿಂದ ಜಾನುವರುಗಳಿಗೆ ನಾಲ್ಕನೇ ಸುತ್ತಿನ ಕಾಲುಬಾಯಿ ಜ್ವರ ತಡೆಗಟ್ಟುವ ಲಸಿಕಾ ಅಭಿಯಾನದ ಚಾಲನೆ, ಪಶು ಸಖಿಯವರಿಗೆ ಇಲಾಖೆಯಿಂದ ಕಿಟ್ ವಿತರಣೆ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮವು ಸೆ.30ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ರವರು ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖಾ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಪ್ರತಿಮಾ, ಡಾ.ಮಂಜ ನಾಯಕ್ ಹಾಗೂ ಪಶುಸಖಿಯರು ಭಾಗವಹಿಸಿದ್ದರು.

ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಹೈನುಗಾರಿಕೆಗೆ ಉಪಯುಕ್ತವಾದ ರಬ್ಬರ್ ಮ್ಯಾಟ್ ವಿತರಣೆ ನಡೆಯಿತು.ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯತ್ ನ ಪಶುಸಖಿಯವರಿಗೆ ಪಶು ಪಾಲನ ಇಲಾಖೆಯಿಂದ ಉಚಿತವಾಗಿ ಕಿಟ್ ವಿತರಣೆ ನಡೆಯಿತು.

ಕಾರ್ಯಕ್ರಮವನ್ನು ಜಯಕೀರ್ತಿ ಜೈನ್ ನಿರೂಪಿಸಿ, ಡಾ.ರವಿಕುಮಾರ್ ಸ್ವಾಗತಿಸಿದರು.

Exit mobile version