ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಯು ಅರ್ಹರನ್ನು ಹುಡುಕಿ ಸೇವೆ ಮಾಡುವುದರಲ್ಲಿ ಮುಕ್ತ ಮನಸ್ಸಿನಿಂದ ತೆರೆದುಕೊಂಡಿದೆ ಎಂದು ವಲಯಾಧ್ಯಕ್ಷ ದಿನೇಶ್ ಎಂ.ಕೆ ಮೂಡುಬಿದಿರೆ ಮೆಚ್ಚುಗೆಯ ಮಾತನ್ನಾಡಿದರು.
ಪ್ರಾಂತ್ಯ-12 ರಲ್ಲಿ ಬರುವ ಬೆಳ್ತಂಗಡಿ ಘಟಕಕ್ಜೆ ಅಧಿಕೃತ ಭೇಟಿ ಮಾಡಿದ ಅವರು ಸೇವಾ ಕಾರ್ಯ ನಡೆಸಿಕೊಟ್ಟರು.
ವಿಶೇಷವಾಗಿ ಸುದ್ದಿ ಬಿಡುಗಡೆ ಗುರುತಿಸಿದ ಧರ್ಮಸ್ಥಳ ಗ್ರಾಮದ ದೊಂಡೊಲೆಯ ವಿಕಲ ಚೇತನರಿರುವ ಅಶಕ್ತ ಕುಟುಂಬಕ್ಕೆ ಆರ್ಥಿಕ ಸಹಕಾರ ಹಾಗೂ ಕುಟುಂಬದ ವಿದ್ಯಾರ್ಥಿಗೆ ಶೈಕ್ಷಣಿಕ ರಕ್ಷೆ ನೀಡಿದರು.
ಬೆಳ್ತಂಗಡಿ ಲಯನ್ಸ್ ಘಟಕದ ಸುವರ್ಣ ಮಹೋತ್ಸವ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮೂಡುಬಿದಿರೆ, ವೇಣೂರು, ಸುಲ್ಕೇರಿ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರುಗಳು, ನಿಕಟಪೂರ್ವ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ಉಪಸ್ಥಿತರಿದ್ದರು.
ಕೃಷ್ಣ ಆಚಾರ್ ಪ್ರಾರ್ಥನೆ ಹಾಡಿದರು.ರಾಮಕೃಷ್ಣ ಗೌಡ ವೇದಿಕೆಗೆ ಆಹ್ವಾನಿಸಿದರು. ವಸಂತ ಶೆಟ್ಟಿ ವಲಯಾಧ್ಯಕ್ಷ ರನ್ನು ಪರಿಚಯಿಸಿದರು.ದತ್ತಾತ್ರೇಯ ಗೊಲ್ಲ ಧ್ವಜವಂದನೆ, ಅಶ್ರಫ್ ಆಲಿಕುಂಞಿ ನೀತಿ ಸಂಹಿತೆ ವಾಚಿಸಿದರು.ಕಾರ್ಯದರ್ಶಿ ಅನಂತಕೃಷ್ಣ ವರದಿ ವಾಚಿಸಿ ಬಳಿಕ ವಲಯಾಧ್ಯಕ್ಷರಿಗೆ ಹಸ್ತಾಂತರಿಸಿದರು.
ಕೋಶಾಧಿಕಾರಿ ಶುಭಾಶಿಣಿ ವಂದಿಸಿದರು.ಪೂರ್ವ ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ ಅವರ ಪುತ್ರಿ ಸಿ.ಎ ಉತ್ತೀರ್ಣರಾದ ನಿಮಿತ್ತ ಭೋಜನ ವ್ಯವಸ್ಥೆಯನ್ನು ಅವರೇ ಪ್ರಾಯೋಜಿಸಿದ್ದರು.ಸೇವಾ ಕಾರ್ಯ ನಿಮಿತ್ತ ಬಡ ಕುಟುಂಬಕ್ಕೆ ಅಕ್ಕಿ, ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ವಿತರಿಸಲಾಯಿತು.