ಕುಕ್ಕೆಡಿ: ಕುಕ್ಕೆಡಿ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ ಇಲಾಖೆ ಇದರ ಆಶ್ರಯದಲ್ಲಿ ಪಂಚಾಯತ್ ಮಟ್ಟದ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಪೆರ್ಮುಡ ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಸೀತಾ ಇವರಿಗೆ ಸನ್ಮಾನ ಕಾರ್ಯಕ್ರಮ ಪೆರ್ಮುಡ ಸ.ಹಿ.ಪ್ರಾ.ಶಾಲೆಯಲ್ಲಿ ಜರಗಿತು.
ಪೆರ್ಮುಡ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶಾಂತಾ ಬಾಯಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕುಕ್ಕೆಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ವೇಣೂರು ವಲಯದ ಮೇಲ್ವಿಚಾರಕಿ ಗುಲಾಬಿ, ವೇಣೂರು ಆರೋಗ್ಯ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಿದರು.
ಕುಕ್ಕೆಡಿ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್, ಪ್ರವೀತಾ, ತೇಜಾಕ್ಷಿ ಗೋಪಾಲ ಶೆಟ್ಟಿ, ಗುಣವತಿ, ರಜನಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಭಾಕರ್, ಸ್ತ್ರೀ ಶಕ್ತಿ ಗೊಂಚಲು ಅಧ್ಯಕ್ಷೆ ನಿರಂಜಿನಿ, ಶಾಲಾ ಮುಖ್ಯ ಶಿಕ್ಷಕಿ ಅನುರಾಧ, ಊರಿನ ಗಣ್ಯರಾದ ಅಶೋಕ ಪಾಣೂರು, ಸಿಪ್ರಿಯನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ನಿವೃತ್ತ ಸಹಾಯಕಿ ಸೀತಾರವರನ್ನು ಸನ್ಮಾನಿಸಲಾಯಿತು.ಸುಜಾತಾ ಕಾರ್ಯಕ್ರಮ ನಿರೂಪಿಸಿ, ಪಂಡಿಂಜೆ ಅಂಗನವಾಡಿ ಕಾರ್ಯಕರ್ತೆ ಪ್ರೇಮ ಸ್ವಾಗತಿಸಿ, ಪೆರ್ಮುಡ ಅಂಗನವಾಡಿ ಕಾರ್ಯಕರ್ತೆ ಜಯಂತಿ ವಂದಿಸಿದರು.