ಸಿದ್ದಬೈಲು: ಸಿದ್ದಬೈಲು ಪರಾರಿ ಅಂಗನವಾಡಿ ಕೆಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಪೋಷಣೆ ಮಸಾಚಾರಣೆ ಸೆ.18ರಂದು ನಡೆಯಿತು.ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ, ಗ್ರಾ.ಪಂ.ಸದಸ್ಯ ಪ್ರವೀಣ್ ಗೌಡ, ರೋಟರಿ ಸಮುದಾಯ ದಳ ಕಲ್ಮಂಜ ಇದರ ಅಧ್ಯಕ್ಷ ರಾಘವ ಭಾಗವಹಿಸಿದ್ದರು.
ಬಾಲವಿಕಾಸ ಸಮಿತಿ ಸದಸ್ಯ ಜಾನಕಿ ಹಳ್ಳಿ ಮದ್ದಿನ ಬಗ್ಗೆ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲಲಿತಾ ಪೌಷ್ಟಿಕ ಆಹಾರ ಸಪ್ತಾಹದ ಬಗ್ಗೆ, ಆರೋಗ್ಯ ಕಾರ್ಯಕರ್ತೆ ಪ್ರಮೀಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ದಿನೇಶ್ ಗೌಡ, ಪೋಷಕರು, ಸ್ತ್ರೀ ಶಕ್ತಿ ಸದಸ್ಯರು ಹಾಜರಿದ್ದರು.ಅಂಗನವಾಡಿ ಕಾರ್ಯಕರ್ತೆ ವಸಂತಿ ನಿರೂಪಿಸಿ, ಆಶಾ ಕಾರ್ಯಕರ್ತೆ ಸರೋಜಿನಿ ಧನ್ಯವಾದವಿತ್ತರು.