ಬೆಳ್ತಂಗಡಿ: ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಿಶ್ವ ಔಷಧಿ ತಜ್ಞರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದಂತ ರಸಾಯನಶಾಸ್ತ್ರ ಮತ್ತು ಔಷಧಿ ವ್ಯಾಪರಿ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶ್ರೀಧರ್ ಕೆ.ವಿ ಯವರು ವಿಶ್ವ ಔಷಧ ತಜ್ಞರ ದಿನದ ಮಹತ್ವವನ್ನು ತಿಳಿಯಪಡಿಸಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದಂತಹ ಡಾಕ್ಟರ್ ಪ್ರಶಾಂತ್ ಬಿ.ಕೆ ಪ್ರಾಂಶುಪಾಲರು ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಹಾಗೂ ಹಾಸ್ಪಿಟಲ್ ಇವರು ವಿದ್ಯಾರ್ಥಿಗಳಿಗೆ ಅಂಗಾಂಗ ದಾನದ ಮಹತ್ವವನ್ನು ವಿವರಿಸಿದರು.
ಪ್ರಸನ್ನ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಎಂ ಮಲ್ಲಿಕಾರ್ಜುನ್ ಗೌಡ ಫಾರ್ಮಸಿ ಕಲಿತ ವಿದ್ಯಾರ್ಥಿಗಳು ಮುಂದೆ ಸಮಾಜ ಆರೋಗ್ಯ ವಿಭಾಗದಲ್ಲಿ ಯಾವ ಯಾವ ರೀತಿಯಲ್ಲಿ ಸೇವೆ ಸಲ್ಲಿಸಬಹುದು ಎಂಬುದಾಗಿ ಅರಿವು ಮೂಡಿಸಿದರು.
ಈ ಸಭೆಯಲ್ಲಿ ಪ್ರಸನ್ನ ಸಿ ಬಿ ಸ್ ಇ ರೆಸಿಡೆನ್ಸಿಯಲ್ ಸ್ಕೂಲಿನ ಪ್ರಾಂಶುಪಾಲರಾದ ಕೆ.ಸ್.ನ್.ಭಟ್ ಉಪಸ್ಥಿತರಿದ್ದರು.
ಈ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಉಜಿರೆಯಲ್ಲಿ ಬೃಹತ್ ರ್‍ಯಾಲಿಯನ್ನು ಹಮ್ಮಿಕೊಂಡಿದ್ದು, ಇದರ ಚಾಲನೆಯನ್ನು ಪ್ರಸನ್ನ ಆಡಳಿತ ಅಧಿಕಾರಿಯಾದ ಕಿರಣ್ ಹೆಬ್ಬಾರ್ ನಡೆಸಿಕೊಟ್ಟರು.