ಬೆಳ್ತಂಗಡಿ: ಬೆಳ್ತಂಗಡಿ ವೇಣೂರು ನೆಮ್ಮದಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಶೀಘ್ರದಲ್ಲಿ ಸಿಬ್ಬಂದಿ ನೇಮಕ ಮಾಡಿ ಕೊಡಲು ರಾಜ್ಯ ಸರ್ಕಾರಕ್ಕೆ ಮತ್ತು ಕಂದಾಯ ಸಚಿವರಿಗೆ ಬೆಳ್ತಂಗಡಿ ತಹಸಿಲ್ದಾರರ ಮೂಲಕ ಎಸ್‌ಡಿಪಿಐ ಅಳದಂಗಡಿ ಬ್ಲಾಕ್ ಸಮಿತಿ ವತಿಯಿಂದ ಮನವಿ ಪತ್ರವನ್ನು ಸೆ.25ರಂದು ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ, ಅಳದಂಗಡಿ ಬ್ಲಾಕ್ ಸಮಿತಿ ಕಾರ್ಯದರ್ಶಿ ಜುನೈದ್ ಪಡ್ಡಂದಡ್ಕ, ಕೋಶಾಧಿಕಾರಿ ಹುಸೈನ್ ಕನ್ನಡಿಕಟ್ಟೆ ಉಪಸ್ಥಿತರಿದ್ದರು.