Site icon Suddi Belthangady

ಉಜಿರೆ: ಆರೋಗ್ಯಭಾಗ್ಯ ಮತ್ತು ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ಮೂಲಕ ಶಿರಸಿಯಿಂದ ಧರ್ಮಸ್ಥಳಕ್ಕೆ ಬಂದ ಯುವಕರ ತಂಡ

ಉಜಿರೆ: ಶಿರಸಿಯಿಂದ ಸೋಮವಾರ ಧರ್ಮಸ್ಥಳಕ್ಕೆ ಸೈಕಲ್ ಯಾನದಲ್ಲಿ ಬಂದ ಎಂಟು ಜನರ ತಂಡ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಶಿರಸಿಯ ಡಾ.ವಿಕ್ರಂ ಹೆಗ್ಡೆ, ರಾಹುಲ್ ಹೆಗ್ಡೆ, ಯೋಗೀಶ್ ಭಟ್, ಗುರುರಾಜ ಹೆಗ್ಡೆ, ದೀಪಕ್ ಕಾಮತ್, ಗೌರವ್ ಪ್ರಭು, ವಿನಾಯಕ ಪ್ರಭು ಮತ್ತು ನಾಗರಾಜ ಭಟ್ ಭಾನುವಾರ ಶಿರಸಿಯಿಂದ ಸೈಕಲ್ ಮೂಲಕ ಹೊರಟು 300 ಕಿ.ಮೀ.ಕ್ರಮಿಸಿ ಸೋಮವಾರ 10 ಗಂಟೆಗೆ ಧರ್ಮಸ್ಥಳ ತಲುಪಿದ್ದಾರೆ.

ದೇವರ ದರ್ಶನ ಮಾಡಿ, ಅನ್ನಪೂರ್ಣಛತ್ರದಲ್ಲಿ ಪ್ರಸಾದ ಸ್ವೀಕರಿಸಿ ಶಿರಸಿಗೆ ಪ್ರಯಾಣ ಮುಂದುವರಿಸಿದರು.

ಶಿರಸಿ ಸೈಕಲ್ ಕ್ಲಬ್: ಸಮಾನ ಮನಸ್ಕರೆಲ್ಲ ಸೇರಿ ಆರೋಗ್ಯ ಮತ್ತು ಪರಿಸರ ರಕ್ಷಣೆ ಬಗ್ಯೆ ಜನಜಾಗೃತಿ ಮೂಡಿಸುವುದಕ್ಕಾಗಿ ಶಿರಸಿ ಸೈಕಲ್ ಕ್ಲಬ್ ಆರಂಭಿಸಿರುವುದಾಗಿ ಸದಸ್ಯರು ತಿಳಿಸಿದ್ದಾರೆ.ಅಲ್ಲದೆ ಆಸಕ್ತರಿಗೆ ನಡಿಗೆ, ಓಟ ಮತ್ತು ಸೈಕಲ್ ಯಾನದ ಬಗ್ಗೆ ಉಚಿತ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿ ನೀಡಿ ಆರೋಗ್ಯ ಮತ್ತು ಪರಿಸರ ರಕ್ಷಣೆಗೆ ಅರಿವು, ಜಾಗೃತಿ ಮೂಡಿಸುತ್ತಿರುವುದಾಗಿ ತಿಳಿಸಿದ್ದಾರೆ.

Exit mobile version