ಕರಂಬಾರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರಿನಲ್ಲಿ ಸೆ.18ರಂದು ನಾರಾವಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟವನ್ನು ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ.ಎಂ ಶೆಟ್ಟಿ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಎಂ ಕೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾರಾವಿ ವಲಯ ನೋಡಲ್ ದೈಹಿಕ ಶಿಕ್ಷಕ ಕೃಷ್ಣಪ್ಪ ಪೂಜಾರಿ ಮಾತನಾಡಿದ್ದರು.
ವೇದಿಕೆಯಲ್ಲಿ ಶಾಲಾಭಿವೃಧಿ ಸಮಿತಿಯ ಉಪಾದ್ಯಕ್ಷರಾದ ವಿಜಯ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ರವಿರಾಜ್ ಗೌಡ, ಗುರುವಾಯನಕೆರೆ ಕ್ಲಸ್ಟರ್ ಸಿ.ಆರ್.ಪಿ ರಾಜೇಶ್, ಪೆರೋಡಿತ್ತಾಯ ಮತ್ತು ನಾರಾವಿ ಕ್ಲಸ್ಟರ್ ಗಳ ಸಿ.ಆರ್.ಪಿ ಕಿರಣ್ ಕುಮಾರ್ ಕೆ ಯಸ್, ನಿವೃತ ಮುಖ್ಯ ಶಿಕ್ಷಕಿ ಪ್ರೇಮಾವತಿ ಭಟ್, ಶಾಲಾ ಮುಖ್ಯ ಶಿಕ್ಷಕರಾದ ರಮೇಶ್ ಛಾವಣ್ ಉಪಸ್ಥಿತಿಯಲ್ಲಿ ಶಾಲೆಗೆ ಸ್ಮಾರ್ಟ್ ಟಿವಿ ನೀಡಿರುವ ಸುನಂದ ಮತ್ತು ವಿಶ್ವನಾಥ ದೇವಾಡಿಗ ಮತ್ತು ಸಂತೋಷ ಹೆಗ್ಡೆಯವರು ಶಾಲಾ ಮಕ್ಕಳಿಗೆ ಐಡಿ, ಬೆಲ್ಟ್ ನೀಡಿದ್ದು ಅವರ ಮಾತೃಶ್ರೀ ವಸಂತಿ ಹೆಗ್ಡೆಯವರನ್ನು ಗೌರವಿಸಲಾಯಿತು.
ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಕೃಷ್ಣಪ್ಪ ಪೂಜಾರಿ ಮತ್ತು ಶಿಕ್ಷಕಿ ಜುಬೇದರವರನ್ನು ಮತ್ತು ಬಿಸಿ ಊಟ ನೌಕರಾಗಿದ್ದು ನಿವೃತಿಯಾಗಿರುವ ಗೀತಾರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯಾದ ಸಾವಿತ್ರ ಸ್ವಾಗತಿಸಿದರು.ಶಿಕ್ಷಕಿಯಾದ ದೀಪಾಶ್ರೀ, ಕಾರ್ಯಕ್ರಮವನ್ನು ನಿರೂಪಿಸಿದರು.ಅತಿಥಿ ಶಿಕ್ಷಕರಾದ ಸದಾಶಿವವರು ಗೌರವನಿತರ ವರದಿ ವಾಚಿಸಿದರು.ಅತಿಥಿ ಶಿಕ್ಷಕಿಯಾದ ರಾಜೇಶ್ವರಿ ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರಕಾಶ್ ಹೆಗ್ಡೆ ಗ್ರಾಮ ಪಂಚಾಯತ್ ಸದಸ್ಯರು, ಮಮತ ಸುನಿಲ್ ಜೈನ ಗ್ರಾಮ ಪಂಚಾಯತ್ ಸದಸ್ಯರು, ಮಾದವ ಕುಲಾಲ್ ಗ್ರಾಮ ಪಂಚಾಯತ್ ಸದಸ್ಯರು, ನವೀನ್ ಸಾಮಾನಿ ಅಧ್ಯಕ್ಷರು ಸಿ.ಎ ಬ್ಯಾಂಕ್, ರಾಮ ಬಂಗೇರ ನಿರ್ದೇಶಕರು ಸಿ.ಎ.ಬ್ಯಾಂಕ್ , ಕುಶಾಲಪ್ಪ ಗೌಡ ಮಾಜಿ ಅಧ್ಯಕ್ಷರು ಹಾ.ಉ ಸ ಸಂಘ, ಚಿದಾನಂದ ಪೂಜಾರಿ ಮಾಜಿ ಅಧ್ಯಕ್ಷರು ಎ.ಪಿ.ಎಂ.ಸಿ ಬೆಳ್ತಂಗಡಿ, ಲಾವಣ್ಯ ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಹಾಯಕಿರು, ಆಶಾ ಕಾರ್ಯಕರ್ತೆ, ಬಿಸಿ ಊಟ ನೌಕರರು, ಶಾಲಾಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪ್ರಗತಿ ಪರ ಕೃಷಿರಾದ ಶಿವಾನಂದ ಹೆಗ್ಡೆ, ಪಿಡಬ್ಲ್ಯೂಡಿ ಗುತ್ತಿಗೆದರಾದ ಶ್ರೀದರ ಶಾಂತಿನಗರ, ವಕೀಲೆ ಶ್ವೇತಾ, ಪ್ರಸನ್ನ ಹೆಗ್ಡೆ ಕರಂಬಾರುಗುತ್ತು, ಸತ್ಯ ಶ್ರೀ ಫ್ರೆಂಡ್ಸ್ ನ ಅಧ್ಯಕ್ಷರಾದ ಉಮೇದ್, ಹಾಗೂ ಗ್ರಾಮ ಮತ್ತು ಬೇರೆ ಬೇರೆ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.