ಶಿಶಿಲ: ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.25 ರಂದು ಸಮುದಾಯ ಭವನ ನಾಗನಡ್ಕ ಶಿಶಿಲದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂತೋಷ್ ಎ.ಎಸ್ ರವರು ವಹಿಸಿ ಮಾತನಾಡಿ, ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಿಸಿದರು.
ಸಭೆಯಲ್ಲಿ ನಿವೃತ್ತ ಪಶುವೈದ್ಯಾಧಿಕಾರಿ ಡಾ| ಯಾದವ ಮತ್ತು ಮಾಜಿ ಅಧ್ಯಕ್ಷ ಯೋಗೀಶ್ ದಾಮ್ಲೆ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ವಲಯ ಹಾಲು ಒಕ್ಕೂಟ ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ, ಬೆಳ್ತಂಗಡಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಬಿ.ಕಾಮತ್, ನಿರ್ದೇಶಕರುಗಳಾದ ಈಶ್ವರಪ್ಪ ಗೌಡ, ಆನಂದ ಡಿ., ಚಂದ್ರಶೇಖರ ಎಂ., ಕೊರಗಪ್ಪ ಗೌಡ, ಶೇಖರ ಪುರುಷ, ಡಿ.ಸುಂದರ, ಡಿ.ಸುಂದರ, ಭವಾನಿ ಜಿ., ಸೇಸಮ್ಮಕೆ, ಸರೋಜ ಕೆ, ಹಾಲು ಪರೀಕ್ಷಕಿ ಶೋಭಾ ಕೆ.ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಡಿ.ಲಕ್ಷ್ಮೀಶ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮೀಶ ಬಿ. ನಿರೂಪಿಸಿದರು.ಸಿಬ್ಬಂದಿ ಶೋಧನ್ ಡಿ.ಧನ್ಯವಾದವಿತ್ತರು.