Site icon Suddi Belthangady

ಶ್ರೀ ಧ.ಮಂ.ಪಾಲಿಟೆಕ್ನಿಕ್ ಕಾಲೇಜಿನ ರಕ್ಷಿತ್ ಹಾಗೂ ಸಂತೋಷ್ ಅಂತರ್ ಪಾಲಿಟೆಕ್ನಿಕ್ ತಾಂತ್ರಿಕ ಪ್ರದರ್ಶನದಲ್ಲಿ ಪ್ರಥಮ ಸ್ಥಾನ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಕೊನೆಯ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ರಕ್ಷಿತ್ ಹಾಗೂ ಸಂತೋಷ್ ಇವರು ಎಸ್.ಎನ್.ಎಂ.ಪಾಲಿಟೆಕ್ನಿಕ್ ಮೂಡುಬಿರೆಯಲ್ಲಿ ನಡೆದ ಅಂತರ್ ಪಾಲಿಟೆಕ್ನಿಕ್ ತಾಂತ್ರಿಕ ಪ್ರದರ್ಶನದಲ್ಲಿ ಮೊದಲ ಸ್ಥಾನವನ್ನು ಗಳಿಸಿ ಕಾಲೇಜಿಗೆ ಹೆಮ್ಮೆ ತಂದಿರುತ್ತಾರೆ.

ಇವರು ಎಮರ್ಜಿಂಗ್ ಫೀಲ್ಡ್ಸ್ ಇನ್ ಸಿವಿಲ್ ಇಂಜಿನಿಯರಿಂಗ್ ಎಂಬ ವಿಷಯದ ಮೇಲೆ ಮಂಡಿಸಿದ ಟೆಕ್ನಿಕಲ್ ಪ್ರೆಸೆಂಟೇಶನ್ ಗೆ ಮೊದಲ ಬಹುಮಾನ ಲಭಿಸಿದೆ.

ಇವರಿಗೆ ಸಿವಿಲ್ ವಿಭಾಗದ ಮುಖ್ಯಸ್ಥೆಯಾದ ತೃಪ್ತಿ ಶೆಟ್ಟಿ ಇವರು ಮಾರ್ಗದರ್ಶನ ನೀಡಿದ್ದರು.

Exit mobile version