ಬೆಳ್ತಂಗಡಿ: ಮಾಲಾಡಿ ಗ್ರಾಮದ ಕೊಲ್ಪೆದಬೈಲು ಶಕ್ತಿನಗರ ನಿವಾಸಿ, ಹಿರಿಯ ಬೀಡಿ ಚಕ್ಕರ್ ಕುಂಞಿಮೋಣು (65) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೆ.24 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಬಂಟ್ವಾಳದ ಬಾಂಬಿಲ ಹಕೀಮ್ ಅವರ ಜೊತೆ ದೀರ್ಘ ವರ್ಷ ಬೀಡಿ ಚಕ್ಕರ್ ಆಗಿದ್ದ ಕುಂಞಿಮೋನು ಅವರು ಪ್ರಸ್ತುತ ಅವರ ಪುತ್ರ ನಿಝಾರ್ ಅವರ ಜೊತೆ ಕೆಲಸ ಮುಂದುವರಿಸಿಕೊಂಡುಹೋಗುತ್ತಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ಒಟ್ಟು 47 ವರ್ಷಗಳಿಂದ ವೃತ್ತಿ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಅವ್ವಮ್ಮ, ನಾಲ್ವರು ಪುತ್ರರಾದ ಮುಹಮ್ಮದ್ ಶರೀಫ್ ಮುಸ್ಲಿಯಾರ್, ಅಬ್ದುಲ್ ಹಕೀಂ, ಆಸಿಫ್ ಮತ್ತು ಅಬೂಸ್ವಾಲಿಹ್ ಮುಸ್ಲಿಯಾರ್, ಇಬ್ಬರು ಹೆಣ್ಣು ಮಕ್ಕಳಾದ ಕುರೈಮತ್ ಮತ್ತು ಝೊಹರಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.